ಹುಬ್ಬಳ್ಳಿ:ವಾಣಿಜ್ಯನಗರಿಯಲ್ಲಿ ರಂಗಪಂಚಮಿ ಹಬ್ಬದ ಪ್ರಯುಕ್ತವಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಶಾಂತಿಯುತ ಹೋಳಿ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿರುವ ಪೊಲೀಸ್ ಇಲಾಖೆ ಚೆನ್ನಮ್ಮ ವೃತ್ತದಲ್ಲಿ ಬೀಡು ಬಿಟ್ಟಿದೆ.
ಹೋಳಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆಯಿಂದ ಹೈಅಲರ್ಟ್ : ಸ್ತಬ್ಧವಾದ ಛೋಟಾ ಮುಂಬೈ - Holi celebration in Hubli
ಈಗಾಗಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಾಹನ ಹಾಗೂ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ, ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿದಂತೆ ಸಾಕಷ್ಟು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ..
ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್
ಈಗಾಗಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಾಹನ ಹಾಗೂ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ, ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿದಂತೆ ಸಾಕಷ್ಟು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಸಾರ್ವಜನಿಕರ ಓಡಾಟ ಸಂಪೂರ್ಣ ತಗ್ಗಿದ್ದು, ಬೆರಳು ಏಣಿಕೆಯಷ್ಟು ವಾಹನಗಳು ಓಡಾಡುತ್ತಿವೆ. ದಿನವೂ ಜನಜಂಗುಳಿಯಿಂದ ತುಂಬಿರುತ್ತಿದ್ದ ವಾಣಿಜ್ಯನಗರಿ ಬಹುತೇಕ ಸ್ತಬ್ಧವಾಗಿದೆ. ಇನ್ನು ಹುಬ್ಬಳ್ಳಿಯ ವಿವಿಧ ನಗರದಲ್ಲಿ ರಂಗಪಂಚಮಿ ರಂಗೇರಿದೆ. ಕೊರೊನಾ ಕರಿನೆರಳಿನ ನಂತರ ಹೋಳಿ ಆಚರಣೆಗೆ ಕಳೆ ಬಂದಂತಾಗಿದೆ.