ಹುಬ್ಬಳ್ಳಿ:ಕೈಗೆ ನಿಲುಕುವ ವಿದ್ಯುತ್ ಸಂಪರ್ಕ ತಂತಿಗಳು, ತೆರೆದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ವಿತರಣಾ ಪೆಟ್ಟಿಗೆ, ಬಾಯಿ ತೆಗೆದುಕೊಂಡೇ ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುತ್ತಿರುವ ದೃಶ್ಯ ಕಂಡು ಬಂದಿದ್ದು, ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ.
ಹೆಸ್ಕಾಂ ನಿರ್ಲಕ್ಷ್ಯ ಆರೋಪ: ಅಪಾಯಕ್ಕೆ ಆಹ್ವಾನ ನೀಡುತ್ತಿವೆ ವಿದ್ಯುತ್ ಟ್ರಾನ್ಸ್ಫಾರ್ಮರ್ಸ್ - ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕ ವಿದ್ಯುತ್
ಸುರಕ್ಷತಾ ಕ್ರಮಗಳಿದ್ದರೂ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಹೆಸ್ಕಾಂ ಇಲಾಖೆ ವಿಫಲವಾದ ಪರಿಣಾಮ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕ ವಿದ್ಯುತ್ ವ್ಯವಸ್ಥೆ ಸದಾ ಅಪಾಯಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ. ಹೆಸ್ಕಾಂ ಅವ್ಯವಸ್ಥೆ ಅರಿಯದ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾಗಿರುವುದು ಅನಿವಾರ್ಯವಾಗಿದೆ.
![ಹೆಸ್ಕಾಂ ನಿರ್ಲಕ್ಷ್ಯ ಆರೋಪ: ಅಪಾಯಕ್ಕೆ ಆಹ್ವಾನ ನೀಡುತ್ತಿವೆ ವಿದ್ಯುತ್ ಟ್ರಾನ್ಸ್ಫಾರ್ಮರ್ಸ್ hescom-neglects-danger-to-power-transformers-hubli-news](https://etvbharatimages.akamaized.net/etvbharat/prod-images/768-512-9200387-824-9200387-1602853861509.jpg)
ಸುರಕ್ಷತಾ ಕ್ರಮಗಳಿದ್ದರೂ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಹೆಸ್ಕಾಂ ಇಲಾಖೆ ವಿಫಲವಾದ ಪರಿಣಾಮ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕ ವಿದ್ಯುತ್ ವ್ಯವಸ್ಥೆ ಸದಾ ಅಪಾಯಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ. ಹೆಸ್ಕಾಂ ಅವ್ಯವಸ್ಥೆ ಅರಿಯದ ಮುಗ್ಧ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾಗಿರುವುದು ಅನಿವಾರ್ಯವಾಗಿದೆ. ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರು ಹಿಂದೇಟು ಹಾಕಿದರೆ, ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುವ ಹೆಸ್ಕಾಂ, ಅವಳಿನಗರದಲ್ಲಿ ಸಾರ್ವಜನಿಕ ವಿದ್ಯುತ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ನಗರದ ಕ್ಲಬ್ ರಸ್ತೆ, ಮಹಾನಗರ ಪಾಲಿಕೆ ಮುಂಭಾಗ ರಸ್ತೆ, ನೂತನ ಸಾರಿಗೆ ಹೋಗುವ ರಸ್ತೆ, ಕಾಯಿನ್ ರಸ್ತೆ, ಮಹಿಳಾ ವಿದ್ಯಾಪೀಠ, ಜನತಾ ಬಜಾರ್, ಬಟರ್ ಮಾರ್ಕೆಟ್, ಸೇರಿದಂತೆ ಬಹುತೇಕ ಕಡೆ ವಿದ್ಯುತ್ ತಂತಿಗಳು ಕೈ ಗೆಟಕುವ ಅಂತರದಲ್ಲಿ ಜೋತು ಬಿದ್ದಿವೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ಹೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.