ಹುಬ್ಬಳ್ಳಿ :ನಿನ್ನೆಯಷ್ಟೇ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಯುವರತ್ನ ಸಿನಿಮಾ ಬ್ಲಾಕ್ ಬಸ್ಟರ್ ಆಗಲೆಂದು ನಗರದರಾಜವಂಶ ಅಭಿಮಾನಿ ಬಳಗ ವಿಶೇಷ ಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಹುಬ್ಬಳ್ಳಿ ಪುನೀತ್ ರಾಜ್ ಕುಮಾರ್ ಅಭಿಮಾನಿ ರಾಘವೇಂದ್ರ ವದ್ದಿ ನೇತೃತ್ವದಲ್ಲಿ ರಾಜವಂಶ ಅಭಿಮಾನಿ ಬಳಗ ಸುಮಾರು ಹದಿನೈದು ಜನ ವಿಶೇಷಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಚಿತ್ರದ ಯಶಸ್ಸಿನ ಜೊತೆಗೆ ವಿಶೇಷ ಚೇತನರ ಬಾಳಿಗೆ ಬೆಳಕಾಗಿದ್ದಾರೆ.