ಹುಬ್ಬಳ್ಳಿ :ಅಕಾಲಿಕ ಮಳೆ ರೈತ ಸಮುದಾಯಕ್ಕೆ ಮತ್ತೆ ಸಂಕಷ್ಟ ತಂದೊಡ್ಡಿದೆ. ಹುಬ್ಬಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತ ಸಮುದಾಯ ಆತಂಕಗೊಂಡಿದೆ.
ಅಕಾಲಿಕ ಮಳೆಗೆ ಬೇಸತ್ತ ರೈತರು : ಹೊಲದ ಕೆಲಸ ಅರ್ಧಕ್ಕೆ ಬಿಟ್ಟು ಮನೆಯತ್ತ ಮುಖ ಮಾಡಿದ ಅನ್ನದಾತ
ಈಗಾಗಲೇ ಲಾಕ್‌ಡೌನ್ ಸಂದರ್ಭದಲ್ಲಿ ಬೇಸತ್ತಿದ್ದ ರೈತರಿಗೆ ಈಗ ಮಳೆಯಾಗುತ್ತಿರುವುದು ಗೊಂದಲಕ್ಕೆ ದೂಡಿದಂತಾಗಿದೆ. ವಾಣಿಜ್ಯ ನಗರಿಯಲ್ಲೂ ಮಳೆ ಮುಂದಿವರೆದಿದ್ದು, ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಬೀದಿ ವ್ಯಾಪಾರಿಗಳು ಪರದಾಡುವಂತಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ..
ಮಳೆ
ಇನ್ನೇನು ಕಡಲೆ, ಗೋಧಿ ಬೆಳೆಗಳು ಕೈಗೆ ಬರುವ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಮತ್ತೆ ಏನು ಸಮಸ್ಯೆ ಕಾದಿದೆಯೋ ಎಂದು ರೈತರು ಭಯ ಭೀತರಾಗಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮತ್ತೊಮ್ಮೆ ರೈತರು ಸಮಸ್ಯೆಗೆ ಸಿಲುಕುವಂತಾಗಿದೆ.
ಈಗಾಗಲೇ ಲಾಕ್‌ಡೌನ್ ಸಂದರ್ಭದಲ್ಲಿ ಬೇಸತ್ತಿದ್ದ ರೈತರಿಗೆ ಈಗ ಮಳೆಯಾಗುತ್ತಿರುವುದು ಗೊಂದಲಕ್ಕೆ ದೂಡಿದಂತಾಗಿದೆ. ವಾಣಿಜ್ಯ ನಗರಿಯಲ್ಲೂ ಮಳೆ ಮುಂದಿವರೆದಿದ್ದು, ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಬೀದಿ ವ್ಯಾಪಾರಿಗಳು ಪರದಾಡುವಂತಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ.