ಧಾರವಾಡ:ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಗ್ರಾಮದ ಸಂಪರ್ಕ ಕಡಿತಗೊಂಡ ಹಿನ್ನೆಲೆ ದಾರಿಯನ್ನು ಗ್ರಾಮಸ್ಥರು ತಾವೇ ಸರಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಗ್ರಾಪಂನ ದಿವ್ಯ ನಿರ್ಲಕ್ಷ್ಯ ಎಂದು ಆರೋಪಿಸಿರುವ ಗ್ರಾಮಸ್ಥರು ತಮ್ಮೂರ ದಾರಿಯನ್ನು ತಾವೇ ಸರಿಪಡಿಕೊಂಡಿದ್ದಾರೆ.
ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮ ಮಳೆಯಿಂದ ಸಂಪರ್ಕ ಕಡಿದುಕೊಂಡಿತ್ತು. ಪ್ರತೀ ಸಲದ ಮಳೆಗೆ ಸೇತುವೆ ಮುಳುಗಡೆಯಾಗುತ್ತದೆ. ಸಾಕಷ್ಟು ಹೋರಾಟ ಮಾಡಿದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ.
ಅರಣ್ಯ ಭಾಗದಿಂದ ನೀರಿನ ಜೊತೆ ಹರಿದು ಬರುವ ಮರದ ದಿನ್ನೆಗಳ ಅಡ್ಡಿಯಿಂದ ಸೇತುವೆ ಮುಳುಗಡೆಯಾಗುತ್ತದೆ. ಹೀಗಾಗಿ ಗ್ರಾಮಸ್ಥರು ತಾವೇ ಚಂದಾ ಸಂಗ್ರಹಿಸಿ ದಾರಿ ಸರಿ ಮಾಡಿಕೊಂಡಿದ್ದಾರೆ. ಸೇತುವೆಗೆ ಅಡ್ಡಲಾಗಿದ್ದ ಮರದ ದಿನ್ನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ನೀರು ಹರಿದು ಹೋಗಲು ದಾರಿ ಮಾಡಿದ್ದಾರೆ.