ಕರ್ನಾಟಕ

karnataka

ETV Bharat / city

ಕೊರೊನಾ ಪತ್ತೆ: ಮನೆ ಮನೆಗೆ ತೆರಳಿ ಸಮೀಕ್ಷೆ ಕಾರ್ಯ ಪ್ರಾರಂಭಿಸಿದ ಆರೋಗ್ಯ ಇಲಾಖೆ - ಧಾರವಾಡ ಜಿಲ್ಲೆಯಲ್ಲಿ ಕೊರೊನಾ ‌ಪಾಸಿಟಿವ್ ಸೋಂಕು ಪತ್ತೆ‌

ಧಾರವಾಡದಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಕೊರೊನಾ ‌ಪಾಸಿಟಿವ್ ಸೋಂಕು ಪತ್ತೆ‌ಯಾದ ಹಿನ್ನೆಲೆ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ.

ಕೊರೊನಾ ಪತ್ತೆ
ಕೊರೊನಾ ಪತ್ತೆ

By

Published : Mar 23, 2020, 10:07 AM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆ‌ ಹಿನ್ನೆಲೆಯಲ್ಲಿ ಹೊಸ ಯಲ್ಲಾಪೂರದಲ್ಲಿ ಜಾಗೃತಿ ಕಾರ್ಯ ನಡೆಯುತ್ತಿದೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಕೆಎಸ್ಆರ್​ಟಿಸಿ, ಖಾಸಗಿ ಬಸ್​ ಸೇರಿದಂತೆ ಅವಳಿ ನಗರದ ಬಿಆರ್​ಟಿ​ಎಸ್ ಬಸ್​ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ. ಸೋಂಕು ಪತ್ತೆಯಾದ ವ್ಯಕ್ತಿ ಮನೆಯಿಂದ ಸುಮಾರು 3 ಕಿಲೋ‌ ಮೀಟರ್ ಪ್ರದೇಶಗಳನ್ನು ಕಂಟೇನ್ಮೆಂಟ್ (ನಿರ್ಬಂಧಿತ ವಲಯ) ಎಂದು ಘೋಷಣೆ ಮಾಡಲಾಗಿದೆ. ಹಾಲು, ತರಕಾರಿ, ದಿನಸಿ ಆಹಾರದ ಅಗತ್ಯ ವಸ್ತುಗಳ ಪೂರೈಕೆ ಎಂದಿನಂತೆ ಶುರುವಾಗಿದೆ.

ABOUT THE AUTHOR

...view details