ಕರ್ನಾಟಕ

karnataka

ETV Bharat / city

ಕಾರ್ಗಿಲ್ ವಿಜಯೋತ್ಸವ.. ಯುದ್ಧದ ದಿನಗಳ ಅನುಭವ ಬಿಚ್ಚಿಟ್ಟ ಹವಾಲ್ದಾರ ಭೀಮಪ್ಪ ಜಾಧವ

1999ರಲ್ಲಿ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿ ದೇಶಸೇವೆ ಮಾಡಿದವರ ಹಲವರ ಪೈಕಿ ಧಾರವಾಡದ ಹವಾಲ್ದಾರ ಭೀಮಪ್ಪ ಜಾಧವ ಕೂಡಾ ಒಬ್ಬರು. ಯುದ್ಧದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಸೆಕ್ಯೂರಿಟಿ ನೀಡುತ್ತಿದ್ದ ಭೀಮಪ್ಪ ಅವರು ಆ ಯುದ್ಧದ ದಿನಗಳ ಬಗ್ಗೆ ಈಟಿವಿ ಭಾರತದೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ..

Hawaldar Bheemappa Jadhava
ಹವಾಲ್ದಾರ ಭೀಮಪ್ಪ ಜಾಧವ

By

Published : Jul 25, 2020, 7:55 PM IST

ಧಾರವಾಡ :ಅದು 90ರ ದಶಕದಲ್ಲಿ ಭಾರತ ಮತ್ತು ಕಡುವೈರಿ ಪಾಕಿಸ್ತಾನದ ನಡುವೆ ನಡೆದ ಯುದ್ಧ. ಅದುವೇ ಕಾರ್ಗಿಲ್ ಮಹಾಯುದ್ಧ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಪಾಕ್ ಸೈನಿಕರನ್ನು ಮಟ್ಟ ಹಾಕಿ ಕಾರ್ಗಿಲ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದರು.

ಹವಾಲ್ದಾರ ಭೀಮಪ್ಪ ಜಾಧವ ಕುಟುಂಬ

ಕಾರ್ಗಿಲ್ ಯುದ್ಧ 1999ರ ಮೇ ಆರಂಭದಿಂದ ಆರಂಭಗೊಂಡು ಜುಲೈ 26 ರಂದು ಕೊನೆಗೊಂಡಿತ್ತು. ಭಾರತೀಯ ಸೈನಿಕರು ಯುದ್ಧದಲ್ಲಿ ಜಯ ಸಾಧಿಸಿದ್ದರು. ಈ ಅಮೋಘ ದಿನದ ಕುರಿತು ಕಾರ್ಗಿಲ್ ಯುದ್ಧದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಸೆಕ್ಯೂರಿಟಿ ನೀಡುತ್ತಿದ್ದ ಹವಾಲ್ದಾರ ಭೀಮಪ್ಪ ಜಾಧವ ಈಟಿವಿ ಭಾರತದೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಯುದ್ಧದ ದಿನಗಳ ಅನುಭವ ಬಿಚ್ಚಿಟ್ಟ ಹವಾಲ್ದಾರ ಭೀಮಪ್ಪ ಜಾಧವ

ಭೀಮಪ್ಪ ಜಾಧವ ಮೂಲತಃ ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದವರು. ಇವರು ಯುದ್ಧದಲ್ಲಿ ನಮ್ಮ ಭಾರತೀಯ ಸೈನಿಕರಿಗೆ ಯುದ್ಧಕ್ಕೆ ಅವಶ್ಯಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಭದ್ರತೆ ನೀಡುತ್ತಿದ್ದರು. ಭೀಮಪ್ಪ ಅವರು ಕೆಲಸ ಮಾಡುತ್ತಿದ್ದ ಬೆಟಾಲಿಯನ್ ಕಮಾಂಡರ್​ ಅವಿನಾಶ ಕೌಲ್ ಅವರ ಮಾರ್ಗದರ್ಶನದಲ್ಲಿ ವಾಹನಗಳ ಮೂಲಕ ಬಾಂಬ್, ಟೆಂಟ್ ಸೇರಿ ಶಸ್ತ್ರಾಸ್ತ್ರಗಳ ಪೂರೈಕೆ ವಾಹನಕ್ಕೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.

ಕರುನಾಡ ಹೆಮ್ಮೆಯ ಯೋಧ

ಈ ಯುದ್ಧದಲ್ಲಿ ಭಾರತದ ಕೆಲ ಸೈನಿಕರು ಹುತಾತ್ಮರಾಗಿದ್ದರು. ಈ ಯುದ್ಧದಲ್ಲಿ ಭಾಗವಹಿಸಿ ದೇಶಸೇವೆ ಮಾಡಿದವರ ಹಲವರ ಪೈಕಿ ಭೀಮಪ್ಪ ಕೂಡಾ ಒಬ್ಬರು.

ABOUT THE AUTHOR

...view details