ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 2.03 ಕೋಟಿ ದೇಣಿಗೆ ನೀಡಲಾಯಿತು.
ಸಿಎಂ ಪರಿಹಾರ ನಿಧಿಗೆ ವಾಯುವ್ಯ ಸಾರಿಗೆ ಸಂಸ್ಥೆ ವಿಭಾಗದಿಂದ ₹ 2 ಕೋಟಿ ದೇಣಿಗೆ - Chief Minister Relief Fund
ಕೊರೊನಾ ವಿರುದ್ಧ ಹೋರಾಡಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಸಿಎಂ ಪರಿಹಾರ ನಿಧಿಗೆ ₹ 2.03 ಕೋಟಿ ದೇಣಿಗೆ ನೀಡಲಾಗಿದೆ.
ಚೆಕ್ ಹಸ್ತಾಂತರ
ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್-19 ಮುಕ್ತಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ದಿನದ ವೇತನ ನೀಡಿದ್ದಾರೆ.
ಪರಿಹಾರ ನಿಧಿಗೆ ದಿನದ ವೇತನ ನೀಡಿ ಸಹಕರಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.