ಕರ್ನಾಟಕ

karnataka

ETV Bharat / city

ಕೊರೊನಾ ಆತಂಕದ ನಡುವೆ ರಸ್ತೆ ಮೇಲೆ ಎಸೆದ ಹ್ಯಾಂಡ್​ಗ್ಲೌಸ್​​​​ - Neglect of medical staff

ಕೊರೊನಾ ಭೀತಿಯ ನಡುವೆ ಸಿಬ್ಬಂದಿ ಬಳಸಿರುವ ಹ್ಯಾಂಡ್​​ಗ್ಲೌಸ್​ ಎಲ್ಲೆಂದರಲ್ಲಿ ಎಸೆದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಅನ್ನೋದು ನಾಗರೀಕರ ಆಗ್ರಹವಾಗಿದೆ.

Hand gloves thrown on the road amid Corona anxiety
ಕೊರೊನಾ ಆತಂಕದ ನಡುವೆ ರಸ್ತೆ ಮೇಲೆ ಎಸೆದ ಹ್ಯಾಂಡ್​ಗ್ಲೌಸ್​​​​

By

Published : Jul 21, 2020, 10:34 PM IST

ಹುಬ್ಬಳ್ಳಿ: ಒಮ್ಮೆ ಬಳಕೆ ಮಾಡಿದ ಹ್ಯಾಂಡ್ ಗ್ಲೌಸ್​​ಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದು, ಸಾರ್ವಜನಿಕರು ಆತಂಕಗೊಂಡಿರುವ ಘಟನೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

ಕೊರೊನಾ ಆತಂಕದ ನಡುವೆ ರಸ್ತೆ ಮೇಲೆ ಎಸೆದ ಹ್ಯಾಂಡ್​ಗ್ಲೌಸ್​​​​

ಕೊರೊನಾ ವೈರಸ್ ಭೀತಿ ನಡುವೆಯೂ ಬೇಜವಾಬ್ದಾರಿಯಿಂದ ಬಳಸಿದ ಹ್ಯಾಂಡ್ ಗ್ಲೌಸ್ ಅನ್ನು ಎಲ್ಲೆಂದರಲ್ಲಿ ಎಸೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕಸದ ಡಬ್ಬಿಗಳಿದ್ದರೂ ಕೂಡ ರಸ್ತೆ ಮಧ್ಯದಲ್ಲಿಯೇ ಎಸೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಇಂತಹ ಅವ್ಯವಸ್ಥೆ ಸೃಷ್ಠಿಸಬಾರದು ಎಂಬುದು ಸಾರ್ವಜನಿಕರ ಆಗ್ರಹ.

ABOUT THE AUTHOR

...view details