ಹುಬ್ಬಳ್ಳಿ :ಎದೆಗುಂದದೆ ಮನೋಸ್ಥೈರ್ಯದಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಯಾರು ಬೇಕಾದರೂ ಸುಲಭವಾಗಿ ಕೊರೊನಾ ಹಿಮೆಟ್ಟಿಸಬಹುದು. ಇದಕ್ಕೆ ನಮ್ಮ ಕುಟುಂಬದ ಐದು ಮಂದಿ ಗುಣಮುಖರಾಗಿರುವುದೇ ನಿದರ್ಶನ ಎಂದು ಕೊರೊನಾ ಜಯಸಿದ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆತ್ಮಸ್ಥೈರ್ಯ ಮತ್ತು ತ್ವರಿತ ಚಿಕಿತ್ಸೆ ಕೋವಿಡ್ಗೆ ರಾಮಬಾಣ : ವಾಕರಸಾ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ - ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್ ರಾಮನಗೌಡರ
ಯಾವುದಕ್ಕೂ ಇರಲಿ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಯಿತು. ಧೈರ್ಯಗೆಡದೆ, ಕಿಮ್ಸ್‌ನ ವೈದ್ಯರಾದ ಲಕ್ಷ್ಮಿಕಾಂತ ಲೋಕರೆಯವರನ್ನು ಸಂಪರ್ಕಿಸಿದೆ. ರಕ್ತ ಪರೀಕ್ಷೆ ಮಾಡಿಸಿದೆ. ಲಸಿಕೆ ರೋಗದ ತೀವ್ರತೆ ಕಡಿಮೆ ಮಾಡಿತ್ತು..
ಎರಡು ಮೂರು ದಿನಗಳಿಂದ ಸಣ್ಣದಾಗಿ ಜ್ವರ, ತಲೆನೋವು, ನೆಗಡಿ ಕಾಣಿಸಿತು. ಈಗಾಗಲೇ ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರಿಂದ ಇದು ಸಾಮಾನ್ಯ ನೆಗಡಿ ಇರಬಹುದು ಎಂದು ಭಾವಿಸಿದ್ದೆ. ಜ್ವರ, ನೆಗಡಿ ಮತ್ತು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡೆ. ಯಾವುದಕ್ಕೂ ಇರಲಿ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಯಿತು. ಧೈರ್ಯಗೆಡದೆ, ಕಿಮ್ಸ್‌ನ ವೈದ್ಯರಾದ ಲಕ್ಷ್ಮಿಕಾಂತ ಲೋಕರೆಯವರನ್ನು ಸಂಪರ್ಕಿಸಿದೆ. ರಕ್ತ ಪರೀಕ್ಷೆ ಮಾಡಿಸಿದೆ. ಲಸಿಕೆ ರೋಗದ ತೀವ್ರತೆ ಕಡಿಮೆ ಮಾಡಿತ್ತು.
ಹೋಂ ಐಸೋಲೇಷನ್‌ನಲ್ಲಿದ್ದು, ಅಗತ್ಯ ಚಿಕಿತ್ಸೆ ಪಡೆದೆ. ಪ್ರತಿ ಮೂರು ತಾಸಿಗೊಮ್ಮೆ ಪಲ್ಸ್ ಆಕ್ಸಿಮೀಟರ್‌ನಿಂದ ಆಮ್ಲಜನಕದ ಪ್ರಮಾಣ ಪರೀಕ್ಷಿಸಿಕೊಳ್ಳುತ್ತಿದ್ದೆ. 94-95ರ ಆಸುಪಾಸಿನಲ್ಲಿದ್ದದ್ದು ಸಮಾಧಾನ ತಂದಿತು. ಪ್ರತಿದಿನ ನಾನಿರುವ ಕೊಠಡಿಯನ್ನು ಸ್ಯಾನಿಟೈಸ್ ಮಾಡಿಕೊಂಡು ಸ್ವಚ್ಛತೆಗೆ ಒತ್ತು ನೀಡಿದೆ. ಬಿಸಿ ಬಿಸಿ ಆಹಾರ ಸೇವಿಸುವುದು, ಕೋಣೆಯೊಳಗೆ ಅಲ್ಪ ನಡಿಗೆ, ವ್ಯಾಯಾಮ ಮಾಡುತ್ತಿದ್ದೆ ಜೊತೆಗೆ ಮನೆಯ ಸದಸ್ಯರಿಗೂ ಸಹ ಕೊರೊನಾ ತಗುಲಿತ್ತು. ಭಯ ಪಡದೇ ಎಲ್ಲರೂ ಗುಣಮುಖರಾಗಿದ್ದೇವೆ ಎಂದು ಹೇಳಿದರು.