ಕರ್ನಾಟಕ

karnataka

ETV Bharat / city

ಜಿಮ್​ ಮಾಡಿದರೆ ಹೃದಯಾಘಾತವಾಗಲ್ಲ.. ಸುಳ್ಳು ಸುದ್ದಿ ಹರಡುವವರ ವಿರುದ್ಧ ದೇಹದಾರ್ಢ್ಯ ಪಟು ಗರಂ - Gym trainers directions

ಜಿಮ್​ ಮಾಡಿದರೆ ಹೃದಯಾಘಾತವಾಗಲ್ಲ.(Heart attack) ಸಾಮಾಜಿಕ ಜಾಲತಾಣದಲ್ಲಿ (Rumours spread on Social media) ಸುಳ್ಳು ಸುದ್ದಿ ಹರಡಬೇಡಿ. ತರಬೇತುದಾರರ ಮಾರ್ಗದರ್ಶನದಲ್ಲಿ(Gym trainers directions) ವ್ಯವಸ್ಥಿತವಾಗಿ ವರ್ಕೌಟ್​ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಮ್​ ತರಬೇತುದಾರ ಕೃಷ್ಣ ಚಿಕ್ಕತುಂಬಳ(Gym trainer krishna)ಹೇಳಿದರು..

gym trainer krishna
ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಕೃಷ್ಣ ಚಿಕ್ಕತುಂಬಳ‌

By

Published : Nov 13, 2021, 6:44 PM IST

ಹುಬ್ಬಳ್ಳಿ :ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬಳಿಕ ಕೆಲ ಕಿಡಿಗೇಡಿಗಳು ವ್ಯಾಯಾಮ, ಕುಸ್ತಿ, ಫಿಟ್​ನೆಸ್ ಸೆಂಟರ್ ಹಾಗೂ ಜಿಮ್​ಗೆ ಹೋಗುವುದಿಂದ ಹೃದಯಾಘಾತವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ.

ಸಾರ್ವಜನಿಕರು ಇದಕ್ಕೆ ಕಿವಿಗೊಡದೇ ತಜ್ಞರ ಸಲಹೆಯ ಮೇರೆಗೆ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ‌ ಹೇಳಿದರು.

ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಕೃಷ್ಣ ಚಿಕ್ಕತುಂಬಳ‌

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಪುನೀತ್ ರಾಜಕುಮಾರ ಅವರು ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಕೆಲ ಕಿಡಗೇಡಿಗಳು ಇದನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಮೂಲಕ ಫಿಟ್​ನೆಸ್ ಕುರಿತು ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ.

ಯುವಕರು ಹಾಗೂ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಈ ವಿಡಿಯೋಗಳನ್ನು ನೋಡಿ ಹೆದರುವಂತಾಗಿದೆ. ನಟ ಪುನೀತ್ ರಾಜಕುಮಾರ್ ಅವರ ಹೃದಯಾಘಾತಕ್ಕೂ ಮತ್ತು ಅವರ ಫಿಟ್​ನೆಸ್, ಜಿಮ್​ಗೂ ಯಾವುದೇ ಸಂಬಂಧವಿಲ್ಲ ಎಂದರು.

ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಆರೋಗ್ಯ ಸಂಬಂಧಿ ವ್ಯಾಯಾಮ ಮಾಡುತ್ತಾ ಉತ್ತಮ ಆರೋಗ್ಯವನ್ನು ಕಂಡುಕೊಂಡಿದ್ದಾರೆ. ಆರೋಗ್ಯವೇ ಭಾಗ್ಯವಾಗಿದೆ.

ಈ ಹಿನ್ನೆಲೆ ಪ್ರತಿಯೊಬ್ಬರು ದೇಹದ ಫಿಟ್​ನೆಸ್ ಕಾಯ್ದುಕೊಳ್ಳಲು ಉತ್ತಮ ಆಹಾರ ಸೇವನೆ ಜೊತೆಗೆ ತರಬೇತುದಾರರ ಮಾರ್ಗಸೂಚಿಯಂತೆ ವ್ಯಾಯಾಮ ಮಾಡಿದರೆ, ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.

ABOUT THE AUTHOR

...view details