ಹುಬ್ಬಳ್ಳಿ: ಕೊರೊನಾ ರೋಗ ದೇಶಾದ್ಯಂತ ಭಯ ಸೃಷ್ಟಿಸಿದ್ದು, ಇದು ಮನುಕುಲದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದರಿಂದ ರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಗರದ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಭಯ ಸೃಷ್ಟಿಸಿರುವ ಕೊರೊನಾ ಮನುಕುಲಕ್ಕೆ ಮಾರಕ: ರಾಜಯೋಗಿಂದ್ರ ಶ್ರೀ - ರಾಜಯೋಗಿಂದ್ರ ಸ್ವಾಮೀಜಿ
ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿಯವರು ಕೊವಿಡ್-19 ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ರಾಜಯೋಗಿಂದ್ರ ಸ್ವಾಮೀಜಿ
ಕೊರೊನಾ ಕುರಿತು ರಾಜಯೋಗಿಂದ್ರ ಸ್ವಾಮೀಜಿ ಜಾಗೃತಿ
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ ಆದೇಶದ ಮೂಲಕ ಸೋಂಕಿನ ನಿಯಂತ್ರಣಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆಯಲ್ಲೇ ಸ್ವಚ್ಛತೆಯಿಂದ ಇರುವುದು ಒಳ್ಳೆಯದು ಎಂದರು.
ಜಗತ್ತಿನಾದ್ಯಂತ ಭಯ ಸೃಷ್ಟಿಸಿರುವ ಕೊರೊನಾ ನಿಜಕ್ಕೂ ಮನುಕುಲಕ್ಕೆ ಮಾರಕ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲ ಆದೇಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಮಾತ್ರವಲ್ಲದೇ ನಮ್ಮ ಜವಾಬ್ದಾರಿ ಕೂಡ ಆಗಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು.