ಕರ್ನಾಟಕ

karnataka

ETV Bharat / city

ನವಲಗುಂದದಲ್ಲಿ ಮಳೆಯಿಂದ ನೆಲಕಚ್ಚಿದ ಪೇರಲ.. ಸಂಕಷ್ಟದಲ್ಲಿ ಬೆಳೆಗಾರರು - ನೆಲಕಚ್ಚಿದ ಪೇರಲ,

ಕಳೆದ ವರ್ಷ ಆದ ನಷ್ಟವನ್ನು ಈ ವರ್ಷ ತುಂಬಿಸಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ನಿರಾಶೆಯಾಗಿದೆ. ಪೇರಲ ಬೆಳೆಗಾರರು ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

Crops destroyd from heavy rain in dharwad
Crops destroyd from heavy rain in dharwad

By

Published : Jun 8, 2021, 9:12 PM IST

Updated : Jun 9, 2021, 1:39 AM IST

ಧಾರವಾಡ: ಕಳೆದ ವರ್ಷ ಲಾಕ್​ಡೌನ್ ಘೋಷಣೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಪೇರಲ ಬೆಳೆಗಾರರು ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಜಿಲ್ಲೆಯ ರೈತರ ಬದುಕು.

ಹೌದು, ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ರೈತರು ಪೇರಲ ಬೆಳೆಗಾರರಿದ್ದು, ನೂರಾರು ಎಕರೆ ತೋಟದಲ್ಲಿ ಪೇರಲ ಬೆಳೆದಿದ್ದಾರೆ. ಆದ್ರೆ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದಿರುವುದು ಒಂದೆಡೆಯಾದ್ರೆ, ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹುಲುಸಾಗಿ ಬೆಳೆದು ನಿಂತಿದ್ದ ಫಲ ನೆಲಕ್ಕುರುಳಿದೆ. ಹೀಗಾಗಿ ಪೇರಲ ಬೆಳೆಗಾರರು ತಲೆಮೇಲೆ ಕೈಹೊತ್ತು ಕೂತಿದ್ದಾರೆ.

ನವಲಗುಂದದಲ್ಲಿ ಮಳೆಯಿಂದ ನೆಲಕಚ್ಚಿದ ಪೇರಲ.. ಸಂಕಷ್ಟದಲ್ಲಿ ಬೆಳೆಗಾರರು

ಒಂದು ಎಕರೆಗೆ ಸುಮಾರು ಒಂದು ಲಕ್ಷ ರೂಪಾಯಿವರೆಗೆ ಖರ್ಚು ಮಾಡಿರುತ್ತಾರೆ. ಕಳೆದ ವರ್ಷ ಆದ ನಷ್ಟವನ್ನು ಈ ವರ್ಷ ತುಂಬಿಸಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ನಿರಾಶೆಯಾಗಿದೆ. ಸುಮಾರು ಎರಡು ಮೂರು ಲಕ್ಷದವರೆಗೆ ರೈತರು ನಷ್ಟ ಅನುಭವಿಸಿದ್ದಾರೆ.

Last Updated : Jun 9, 2021, 1:39 AM IST

ABOUT THE AUTHOR

...view details