ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಮದುವೆಯಾದ ಮರುದಿನವೇ ವರ ಸಾವು!

ತಬಕದಹೊನ್ನಳ್ಳಿಯಲ್ಲಿ ಶನಿವಾರ ವರನ ಸ್ವಗೃಹದಲ್ಲಿ ಸರಳವಾಗಿ ಮದುವೆ ಜರುಗಿತ್ತು. ಮದುವೆಯ ನಂತರ ಶಿಗ್ಗಾಂವ ತಾಲೂಕಿನ‌ ಮೂಕಬಸರಿಕಟ್ಟಿಯಲ್ಲಿನ ವಧುವಿನ ಮನೆಗೆ ನವದಂಪತಿ ತೆರಳಿದ್ದರು. ವಧುವಿನ ಮನೆಯಲ್ಲಿ ಶಶಿಕುಮಾರ್‌ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

groom-dead-after-marriage-in-hubli
ವರ ಸಾವು

By

Published : May 2, 2021, 3:02 PM IST

Updated : May 2, 2021, 5:14 PM IST

ಹುಬ್ಬಳ್ಳಿ: ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.

ಗ್ರಾಮದ ಶಶಿಕುಮಾರ್ ಪಟ್ಟಣಶೆಟ್ಟಿ (ಅರಿಷಣಗೇರಿ) ಮೃತ ಮದುಮಗ. ತಬಕದಹೊನ್ನಳ್ಳಿಯಲ್ಲಿ ಶನಿವಾರ ವರನ ಸ್ವಗೃಹದಲ್ಲಿ ಸರಳವಾಗಿ ಮದುವೆ ಜರುಗಿತ್ತು. ಮದುವೆಯ ನಂತರ ಶಿಗ್ಗಾಂವ ತಾಲೂಕಿನ‌ ಮೂಕಬಸರಿಕಟ್ಟಿಯಲ್ಲಿನ ವಧುವಿನ ಮನೆಗೆ ನವದಂಪತಿ ತೆರಳಿದ್ದರು.

ವಧುವಿನ ಮನೆಯಲ್ಲಿ ಶಶಿಕುಮಾರ್‌ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸಂತೋಷದಿಂದ ಇರಬೇಕಾದ ಎರಡೂ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ.

Last Updated : May 2, 2021, 5:14 PM IST

ABOUT THE AUTHOR

...view details