ಹುಬ್ಬಳ್ಳಿ:ವಾಸ್ಕೋಡ್ ಗಾಮಾ - ಲೋಂಡಾ ವಿಭಾಗದ ದೂಧ್ಸಾಗರ್ - ಸೊನೌಲಿಂ ನಿಲ್ದಾಣದ ನಡುವೆ ಗುರುವಾರ ರಾತ್ರಿ 9.15ರ ಸುಮಾರಿಗೆ ಗೂಡ್ಸ್ ರೈಲಿನ ಒಂದು ಬೋಗಿ ಹಳಿ ತಪ್ಪಿದ ಘಟನೆ ಸಂಭವಿಸಿದೆ. ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹುಬ್ಬಳ್ಳಿಯ ವಿಪತ್ತು ನಿರ್ವಹಣೆ ಕೊಠಡಿಯಿಂದ ಪರಿಸ್ಥಿತಿ ನಿಭಾಯಿಸುತ್ತಿದೆ. ಲೈನ್ ಮರುಜೋಡಣೆಗಾಗಿ ಕ್ಯಾಸಲ್‌ರಾಕ್ ಸ್ಟೇಷನ್ ಮತ್ತು ವಾಸ್ಕೋಡ್-ಗಾಮಾ ನಿಲ್ದಾಣದಿಂದ ಉಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ಇಂಜಿನಿಯರಿಂಗ್ ತಂಡ ಸ್ಥಳಕ್ಕೆ ತೆರಳಿದೆ.