ಹುಬ್ಬಳ್ಳಿ: ಅಹಾರ ಧಾನ್ಯಗಳ ಕಿಟ್ಗಳು ಬಿಜೆಪಿಯಿಂದ ದುರ್ಬಳಕೆ ಆಗುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಬಿಜೆಪಿ ವಿರುದ್ಧ ಅಹಾರ ಧಾನ್ಯಗಳಿರುವ ಕಿಟ್ಗಳ ದುರುಪಯೋಗ ಆರೋಪ - selling foods kit in hubli
ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ನೀಡಿರುವ ಕಿಟ್ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.
ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ನೀಡಿದ ಕಿಟ್ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಬಡವರು, ನಿರ್ಗತಿಕರಿಗೆ ನೀಡಲು ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ನಿಂದ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಈ ಕಿಟ್ಗಳು ದುರ್ಬಳಕೆಯಾಗುತ್ತಿವೆ. ಆಹಾರ ಧಾನ್ಯಗಳ ಕಿಟ್ಗಳನ್ನು ನಾವೇ ಕೊಡುತ್ತಿದ್ದೇವೆ ಎಂದು ಬಿಜೆಪಿ ಪೋಸ್ ಕೊಡುತ್ತಿದೆ. ಕಿಟ್ಗಳ ಮೇಲೆ ಸುಧಾಮೂರ್ತಿ ಅಂತ ಹೆಸರು ಇದ್ರೂ ತಾವೇ ಕೊಟ್ಟಿರೋದಾಗಿ ಫೇಸ್ಬುಕ್ ಪೋಸ್ಟ್ಗಳಲ್ಲಿ ಬಿಜೆಪಿ ಮುಖಂಡ ಪ್ರಭು ನವಲಗುಂದಮಠ ಹಾಕಿಕೊಂಡಿದ್ದಾರೆ.
ಇನ್ನು ಜಿಲ್ಲಾಡಳಿತಕ್ಕೆ ದಾನಿಗಳು ನೀಡಿದ್ದ ಕಿಟ್ಗಳು ಬಿಜೆಪಿ ಮುಖಂಡರ ಕೈಗೆ ಸಿಕ್ಕಿದ್ದು ಹೇಗೆ?, ದಾನಿಗಳು ನೀಡಿದ್ದ ಆಹಾರದ ಕಿಟ್ಗಳನ್ನ ಹಂಚಿ ಬಿಜೆಪಿ ಪ್ರಚಾರ ಪಡೆಯುತ್ತಿದ್ದೇಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.