ಧಾರವಾಡ: ನಮ್ಮ ಜಾತಿ ಹಿಂದೂ ಪಂಚಮಸಾಲಿ. ಆದರೆ ನಾವು ಆರಾಧಿಸುವುದು ಮಾತ್ರ ಯೇಸುವನ್ನು. ಮುಂದೆಯೂ ಏಸುವನ್ನೇ ಆರಾಧಿಸುತ್ತೇವೆ ಎಂದು ಬಂಧಿತ ಫಾಸ್ಟರ್ ಸೋಮು ಅವರಾಧಿ ಸೋದರಿ ಗಂಗಮ್ಮ ಹುಲ್ಲೂರ ಹೇಳಿದ್ದಾರೆ.
ಹುಬ್ಬಳ್ಳಿ ಭೈರಿದೇವರಕೊಪ್ಪ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ಹುಬ್ಬಳ್ಳಿ ಭೈರಿದೇವರಕೊಪ್ಪ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಾದಿ ಬೆಂಬಲಾರ್ಥ ಜೆಡಿಎಸ್ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಗುರುರಾಜ್ ಹುಣಸಿಮರದ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ಕರೆದ ಹುಣಸಿಮರದ ಅವರನ್ನೇ ಗಂಗಮ್ಮ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಗಮ್ಮ, ಪ್ರಜಾಪ್ರಭುತ್ವದಲ್ಲಿ ನಮಗೆ ದೇವರನ್ನು ಆರಾಧಿಸುವ ಹಕ್ಕು ಇಲ್ಲವೇ?. ಪ್ರಾರ್ಥನಾ ಸಭೆಗೆ ಬನ್ನಿ ಎಂದು ಯಾರನ್ನೂ ನಾವು ಕರೆದಿಲ್ಲ. ಮನೆ ಮನೆಗೆ ಹೋಗಿ ಮತಾಂತರವನ್ನೂ ಮಾಡಿಲ್ಲ. ನಾವು ಈಗ ಮುಂದೆ ಪಂಚಮಸಾಲಿ ಲಿಂಗಾಯತರಾಗಿಯೇ ಇರುತ್ತೇವೆ. ಆದರೆ, ಆರಾಧಿಸುವ ಏಕೈಕ ದೇವರು ಮಾತ್ರ ಏಸು ಕ್ರಿಸ್ತ ಎಂದಿದ್ದಾರೆ.
ನಮ್ಮ ಜೀವನದಲ್ಲಿ ಬದಲಾವಣೆ ಮಾಡಿದ ಏಕೈಕ ದೇವರು ಏಸು ಕ್ರಿಸ್ತ. ತಮ್ಮ ಸೋಮು ಮತ್ತು ನಾವು ಏಸುವನ್ನೇ ಆರಾಧಿಸುತ್ತೇವೆ. ನಮ್ಮ ಎಲ್ಲ ಕ್ರಿಶ್ಚಿಯನ್ ಸಭೆಗಳಿಗೆ ಭದ್ರತೆ ಬೇಕು. ನಮಗೆ ಸರ್ಕಾರ ಭದ್ರತೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮತಾಂತರಗೊಳ್ಳುವಂತೆ ಪ್ರಚೋದನೆ ಆರೋಪ : ಸೋಮು ಅವರಾಧಿ ಪೊಲೀಸ್ ವಶಕ್ಕೆ