ಹುಬ್ಬಳ್ಳಿ:ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಧಾರವಾಡದ ರಾಮನಗರ ನಿವಾಸಿ ರಾಜಶೇಖರ ನವಲೂರ ಅವರಿಗೆ ಲಂಡನ್‌ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ, ಅವರಿಂದ 4.49 ರೂ. ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ.
ರಾಜಶೇಖರ ಅವರ ತಾಯಿಯ ಫೇಸ್‌ಬುಕ್ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್‌ನಿಂದ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದಾನೆ. ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರೆ ಶುಲ್ಕವೆಂದು ಹಂತಹಂತವಾಗಿ ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.