ಹುಬ್ಬಳ್ಳಿ: ಆರ್‌ಟಿ ಗೋಲ್ಡ್ ಎಂಬ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಹಣ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 4,27,010 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hubli fraud case :ಸಲೇನಾ ಎಂಬ ಮಹಿಳೆ ಪ್ರಕರಣದ ಆರೋಪಿಯಾಗಿದ್ದಾರೆ. ಹುಬ್ಬಳ್ಳಿಯ ನವನಗರ ಕೆಹೆಚ್‌ಬಿ ಕಾಲೋನಿ ನಿವಾಸಿ ಸುಧಾಕರ ಕುರ್ಲೇಕರ್ ಎಂಬುವರು ವಂಚನೆಗೀಡಾದವರು.
ಆರ್‌ಟಿ ಗೋಲ್ಡ್ ಆ್ಯಪ್‌ನಲ್ಲಿ ಹಣ ಹೂಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಸುಧಾಕರ್ ಅವರ ಸ್ನೇಹಿತ ರಾಜೇಶ ಜಾಧವ್ ಅಕ್ಟೋಬರ್ 10ರಂದು ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು.