ಕರ್ನಾಟಕ

karnataka

ETV Bharat / city

ಧಾರವಾಡದಲ್ಲಿ ನಾಲ್ವರಿಗೆ ಕೊರೊನಾ: 175ಕ್ಕೇರಿದ ಸೋಂಕಿತರ ಸಂಖ್ಯೆ

ಧಾರವಾಡ ಜಿಲ್ಲೆಯಲ್ಲಿ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಾಣಿಕೊಂಡ ಮೂವರು ಹಾಗೂ ಗುಜರಾತ್​​ನಿಂದ ಹಿಂದಿರುಗಿದ್ದ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Four Corona Positive cases detected in Dharwad
ಧಾರವಾಡದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್...175ಕ್ಕೇರಿದ ಸೋಂಕಿತರ ಸಂಖ್ಯೆ

By

Published : Jun 18, 2020, 8:27 PM IST

ಧಾರವಾಡ:ಜಿಲ್ಲೆಯಲ್ಲಿ ಇಂದು 5 ವರ್ಷದ ಬಾಲಕ ಸೇರಿ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಾಣಿಕೊಂಡ ಮೂವರು ಹಾಗೂ ಗುಜರಾತ್​​ನಿಂದ ಹಿಂದಿರುಗಿದ್ದ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 56 ವರ್ಷದ ಪುರುಷ (ಪಿ-7824), 5 ವರ್ಷದ ಬಾಲಕ (ಪಿ-7825), 28 ವರ್ಷದ ಪುರುಷ (ಪಿ-7826), 30 ವರ್ಷದ ಪುರುಷ (ಪಿ-7827) ಒಟ್ಟು ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details