ಹುಬ್ಬಳ್ಳಿ:ನಿನ್ನೆ ರಾತ್ರಿ ಬಂಡಿವಾಡ ಬಳಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವೆ ಉಮಾಶ್ರೀ ಅವರು ಕಣ್ಣೀರು ಹಾಕಿದ್ದಾರೆ.
ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ತೀರಾ ನೋವುಂಟು ಮಾಡಿದೆ: ಉಮಾಶ್ರೀ ಕಣ್ಣೀರು - road accident two dead
ಕಾರು ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಹೆಚ್ಚು ನೋವುಂಟು ಮಾಡಿದೆ. ಕಳೆದುಕೊಂಡ ಕಾರುಗಳನ್ನು ಮತ್ತೊಮ್ಮೆ ಖರೀದಿಸಬಹುದು. ಆದರೆ, ಹೋದ ಜೀವ ಮತ್ತೆ ಮರಳಿ ಬರುವುದಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ದುಃಖಿತರಾದರು.
ಮಾಜಿ ಸಚಿವೆ ಉಮಾಶ್ರೀ
ಅಪಘಾತದಲ್ಲಿ ನನ್ನ ಕಾರು ಕೂಡ ಇತ್ತು. ಆದರೆ, ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಇಬ್ಬರ ಪ್ರಾಣಗಳು ಹೋದವಲ್ಲ. ಅದರಿಂದ ತುಂಬಾ ನೋವಾಗುತ್ತಿದೆ. ಕಳೆದುಕೊಂಡ ಕಾರುಗಳನ್ನು ಮತ್ತೊಮ್ಮೆ ಖರೀದಿಸಬಹುದು. ಆದರೆ, ಹೋದ ಜೀವ ಮತ್ತೆ ಮರಳಿ ಬರುವುದಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.
ನನ್ನ ಕಾರು ಚಾಲಕ ಕೊಪ್ಪಳ ಮೂಲದಾತ. ಹುಬ್ಬಳ್ಳಿಯಲ್ಲಿ ಕಾರು ಬಿಟ್ಟು ನಾನು ಬೆಂಗಳೂರಿಗೆ ಹೋಗಿದ್ದೆ. ಆದರೆ, ಆತ ತನ್ನ ಪತ್ನಿ ಭೇಟಿಗೆ ಕಾರು ತೆಗೆದುಕೊಂಡು ಹೋಗಿದ್ದ. ಈ ಘಟನೆಯಿಂದ ಬಹಳ ನೋವಾಗಿದೆ ಎಂದು ಹೇಳಿದ್ದಾರೆ.