ಕಲಘಟಗಿ(ಧಾರವಾಡ):ಮಾಜಿ ಶಾಸಕ ಸಂತೋಷ್ ಲಾಡ್ ಮಡ್ಕಿಹೊನ್ನಳ್ಳಿಯಲ್ಲಿರುವ ಅಮೃತ ನಿವಾಸದಲ್ಲಿ ಅಕ್ಕ ಚೀಲಗಳನ್ನು ತಾವೇ ಲಾರಿಯಿಂದ ಅನ್ಲೋಡ್ ಮಾಡಿ ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಜನರಿಗೆ ಹಂಚಲು ತಂದಿದ್ದ ಅಕ್ಕಿ ಚೀಲಗಳನ್ನು ಲಾರಿಯಿಂದ ಇಳಿಸಿದ ಮಾಜಿ ಸಚಿವ ಸಂತೋಷ್ ಲಾಡ್ - ಧಾರವಾಡ ಜಿಲ್ಲಾ ಸುದ್ದಿ
ಕಲಘಟಗಿ ಕ್ಷೇತ್ರದ ಪ್ರತಿ ಮನೆಯ ವಿತರಣೆಗಾಗಿ ತರುಸಿರುವ ಅಕ್ಕಿಯ ಚೀಲಗಳನ್ನು ಲಾರಿಯಿಂದ ಮಾಜಿ ಸಚಿವ ಸಂತೋಷ್ ಲಾಡ್ ಕೆಳಗಿಳಿಸಿದ್ದಾರೆ. ಭುಜದ ಮೇಲೆ ಅಕ್ಕಿ ಚೀಲಗಳನ್ನು ಹೊತ್ತು ಸಾಗುತ್ತಿರುವುದನ್ನು ಅವರ ಅಭಿಮಾನಿಗಳು ವಿಡಿಯೋ ಮಾಡಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನರಿಗೆ ಹಂಚಲು ತಂದಿದ್ದ ಅಕ್ಕಿ ಚೀಲ ಲಾರಿಯಿಂದ ಕೆಳಗಿಸಿದ ಮಾಜಿ ಸಚಿವ ಸಂತೋಷ್ ಲಾಡ್
ಕಲಘಟಗಿ ಕ್ಷೇತ್ರದ ಪ್ರತಿ ಮನೆಯ ವಿತರಣೆಗಾಗಿ ಅಕ್ಕಿಯನ್ನು ಲಾಡ್ ಅವರು ತರಿಸಿದ್ದು, ಲಾರಿಯಲ್ಲಿನ ಅಕ್ಕಿ ಚೀಲಗಳನ್ನು ತಾವೇ ಹೊತ್ತು ಮನೆಯಲ್ಲಿ ಇಳಿಸಿದ್ದಾರೆ. ಆ ಮೂಲಕ ಮೂಟೆಗಳನ್ನು ಕೆಳಗಿಳಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ನೆರವು ನೀಡಿದ್ದಾರೆ. ಅಭಿಮಾನಿಗಳು ತಮ್ಮ ನಾಯಕನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.