ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ತಡರಾತ್ರಿ ನಡೆದಿದೆ.
ಲಾರಿ ಬೈಕ್ ಡಿಕ್ಕಿ.. ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ದುರ್ಮರಣ - ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ
ಹುಬ್ಬಳ್ಳಿಯ ತಾರಿಹಾಳದ ಬಳಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ತಿಲಕ ಕಲಬುರ್ಗಿ ಮೃತಪಟ್ಟಿದ್ದಾರೆ.
ತಿಲಕ ಕಲಬುರ್ಗಿ
ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ಪುತ್ರ ತಿಲಕ ಕಲಬುರ್ಗಿ (22) ಮೃತ ದುರ್ದೈವಿ. ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಅವಘಡ ಸಂಭವಿಸಿದೆ. ತಿಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಸ್ವಾತಂತ್ರ್ಯ ದಿನದ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು: ವಿಫಲಗೊಳಿಸಿದ ಪೊಲೀಸರು