ಹುಬ್ಬಳ್ಳಿ: ಕರ್ತವ್ಯ ಮುಗಿಸಿ ರಜೆಗೆ ಬರುತ್ತಿದ್ದ ಯೋಧರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಜೆಗೆಂದು ಊರಿಗೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - ಮಂಟೂರು ಬಟ್ಟಿವ ಯೋಧ ಸಾವು
ಕರ್ತವ್ಯ ಮುಗಿಸಿ ರಜೆಗೆ ಊರಿಗೆ ಬರುವಾಗ ಕೋಲ್ಕತ್ತಾದಲ್ಲಿ ರೈಲಿನಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಯೋಧ ಮಂಜುನಾಥ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಎಸ್ಎಫ್ ಬೆಟಾಲಿಯನ್ ತಂಡದಿಂದ ಅಂತಿಮ ನಮನದ ಜೊತೆಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು.
![ರಜೆಗೆಂದು ಊರಿಗೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ foot-slips-soldier-died-in-hubli](https://etvbharatimages.akamaized.net/etvbharat/prod-images/768-512-10538334-thumbnail-3x2-kdkd.jpg)
ನಗರದ ಮಂಟೂರು ರಸ್ತೆ ಸುಣ್ಣದ ಬಟ್ಟಿವ ನಿವಾಸಿ ಯೋಧ ಮಂಜುನಾಥ. ರೈಲ್ವೆ ಪ್ರಯಾಣದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮಂಜುನಾಥ್ ಕಳೆದ ಆರು ವರ್ಷಗಳಿಂದ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಿಎಸ್ಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯ ಮುಗಿಸಿ ರಜೆಗೆ ಊರಿಗೆ ಬರುವಾಗ ಕೋಲ್ಕತ್ತಾದಲ್ಲಿ ರೈಲಿನಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಯೋಧ ಮಂಜುನಾಥ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಎಸ್ಎಫ್ ಬೆಟಾಲಿಯನ್ ತಂಡದಿಂದ ಅಂತಿಮ ನಮನದ ಜೊತೆಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಈ ವೇಳೆ ರಸ್ತೆ ಉದ್ದಕ್ಕೂ ಜೈಕಾರ ಮೋಳಗಿತು.