ಹುಬ್ಬಳ್ಳಿ: ನಗರದ ಐಸ್ ಕ್ಯೂಬ್ ಪಬ್ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸುವಲ್ಲಿ ಗೋಕುಲ್ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿಗಳಾದ ಸಹದೇವ ಹಿರೇಕೆರೂರು, ಶೈಲೇಶ್ ಹರಿವಾಣ, ಆಸೀಸ್ ಕೊರವಾರ, ಶ್ರೀನಿವಾಸ್ ಪೂಜಾರ್, ಅಕ್ಷಯ ಬಂಧಿತ ಆರೋಪಿಗಳು. ಇವರು ಸೆ. 12 ರ ತಡರಾತ್ರಿ ರೆಡಿಯೋ ಜಾಕಿ ಹಾಗೂ ಆಕೆಯ ಪತಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು.
ಹುಬ್ಬಳ್ಳಿ ಐಸ್ ಕ್ಯೂಬ್ ಪಬ್ ಗಲಾಟೆ ಪ್ರಕರಣ: ಐವರ ಬಂಧನ
ಐಸ್ ಕ್ಯೂಬ್ ಪಬ್ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ್ ರೋಡ್ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಗೋಕುಲ್ ರೋಡ ಠಾಣೆ
ಆರೋಪಿಗಳು ಕುಡಿದ ನಶೆಯಲ್ಲಿ ಜಗಳ ತೆಗೆದು ಆರ್ಜೆ ಮೇಘಾ, ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಗೋಕುಲ್ ರೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.