ಕರ್ನಾಟಕ

karnataka

ETV Bharat / city

ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಕ್ರೋಶ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಾಲಿಕೆ ಮಾಜಿ ಸದಸ್ಯ - ಗಣೇಶಪೇಟೆಯಲ್ಲಿರುವ ಮೀನು ಮಾರುಕಟ್ಟೆ

ಸ್ಮಾರ್ಟ್​ ಸಿಟಿ ನಿರ್ಮಾಣ ಹಿನ್ನಲೆಯಲ್ಲಿ ಗಣೇಶ ಪೇಟೆಯಲ್ಲಿರುವ ಮೀನು ಮಾರುಕಟ್ಟೆಯನ್ನು ಮಂಟೂರ ರಸ್ತೆಯ ಕೆ.ಬಿ.ನಗರ, ಕರ್ಕಿ ಬಸವೇಶ್ವರ ನಗರದಲ್ಲಿ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ ಎಂದು ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣ ಅಸಮಧಾನ ಹೊರಹಾಕಿದ್ದಾರೆ.

ಮೀನು ಮಾರುಕಟ್ಟೆ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ: ಮಾಜಿ ಪಾಲಿಕೆ ಸದಸ್ಯ ಮುತ್ತಣ್ಣ ಎಚ್ಚರಿಕೆ

By

Published : Nov 21, 2019, 2:24 AM IST

ಹುಬ್ಬಳ್ಳಿ:ಸ್ಮಾರ್ಟ್ ಸಿಟಿ ನಿರ್ಮಾಣ ಹಿನ್ನಲೆಯಲ್ಲಿ ಗಣೇಶ ಪೇಟೆಯಲ್ಲಿರುವ ಮೀನು ಮಾರುಕಟ್ಟೆಯನ್ನು ಮಂಟೂರ ರಸ್ತೆಯ ಕೆ.ಬಿ.ನಗರ, ಕರ್ಕಿ ಬಸವೇಶ್ವರ ನಗರದಲ್ಲಿ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ ಎಂದು ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣ ಅಸಮಧಾನ ಹೊರಹಾಕಿದ್ದಾರೆ.

ಮೀನು ಮಾರುಕಟ್ಟೆ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ: ಮಾಜಿ ಪಾಲಿಕೆ ಸದಸ್ಯ ಮುತ್ತಣ್ಣ ಎಚ್ಚರಿಕೆ

ಕಳೆದ ಹಲವಾರು ವರ್ಷಗಳಿಂದ ಗಣೇಶ ಪೇಟೆಯಲ್ಲಿ ಮೀನು ಮಾರಾಟ ಮಾಡಲಾಗುತ್ತಿದ್ದು, ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 6.12 ಕೋಟಿ ರೂ ವೆಚ್ಚದ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಹಾಲಿ ಇರುವ ಮಾರುಕಟ್ಟೆಯನ್ನು ಜನನಿಬಿಡ ಪ್ರದೇಶಗಳಾದ ಕರ್ಕಿ ಬಸವೇಶ್ವರ ನಗರಕ್ಕೆ ಅಧಿಕಾರಿಗಳು ಸ್ಥಳಾಂತರಿಸುತ್ತಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ.

ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಮರು ಚರ್ಚೆ ನಡೆಸಿ ನಗರದ ಹೊರವಲಯದ ಸ್ಥಳಕ್ಕೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details