ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: 'ದಿ ಹಿಂದೂ' ಕಚೇರಿಯಲ್ಲಿ ಆಕಸ್ಮಿಕ ಬೆಂಕಿ - Accidental fire at 'The Hindu' newspaper office

'ದಿ ಹಿಂದೂ' ದಿನ ಪತ್ರಿಕೆ ಕಚೇರಿಯಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಂಪ್ಯೂಟರ್, ಟಿವಿ, ಹವಾ ನಿಯಂತ್ರಣ ಘಟಕಗಳುಸೇರಿದಂತೆ ಮತ್ತಿತರೆ ಉಪಕರಣಗಳು ಹಾಗು ಕೆಲವು ದಾಖಲೆಗಳು ಬೆಂಕಿಗಾಹುತಿಯಾಗಿದೆ.

The Hindu
The Hindu

By

Published : Oct 29, 2021, 9:19 AM IST

ಹುಬ್ಬಳ್ಳಿ: ಇಂದು ಬೆಳಗಿನ ಜಾವ 'ದಿ ಹಿಂದೂ' ದಿನ ಪತ್ರಿಕೆ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ಗೋಕುಲ ರಸ್ತೆಯ ಗ್ರೀನ್ ಗಾರ್ಡನ್​ನ ಕಲಬುರಗಿ ಕಾಟ್ವೆ ಐಡೆಂಟಿಟಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕಚೇರಿಯ ಒಳಗಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್, ತಕ್ಷಣ ತಮ್ಮ ಮೇಲ್ವಿಚಾರಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ದಿ ಹಿಂದೂ ಕಚೇರಿಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ

ಕಚೇರಿಯಲ್ಲಿದ್ದ ಕೆಲವು ಪೀಠೋಪಕರಣಗಳು, ಕಂಪ್ಯೂಟರ್, ಟಿವಿ, ಹವಾ ನಿಯಂತ್ರಣ ಘಟಕಗಳು ಸೇರಿದಂತೆ ಮತ್ತಿತರೆ ಉಪಕರಣಗಳು ಹಾಗು ಕೆಲವು ದಾಖಲೆಗಳು ಬೆಂಕಿಗಾಹುತಿಯಾಗಿದೆ.

ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್​​ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

ABOUT THE AUTHOR

...view details