ಕರ್ನಾಟಕ

karnataka

ETV Bharat / city

ಶಾರ್ಟ್ ಸರ್ಕ್ಯೂಟ್​ನಿಂದ ಜನರಲ್ ಸ್ಟೋರ್​ಗೆ ಬೆಂಕಿ, ಅಪಾರ ಹಾನಿ - Hubli Fire accident news

ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿಂಗನಗೌಡ ಪಾಟೀಲ ಎಂಬುವರಿಗೆ ಸೇರಿದ ಜನರಲ್ ಸ್ಟೋರ್​ಗೆ ಬೆಂಕಿ ಹೊತ್ತಿಕೊಂಡಿದೆ. ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳು ಸೇರಿದಂತೆ ಅಂಗಡಿಯಲ್ಲಿ ಇರಿಸಲಾಗಿದ್ದ ವಿವಿಧ ವ್ಯವಹಾರದ ದಾಖಲೆ ಪತ್ರಗಳ ಸಮೇತ ನಗದು ಹಣ ಬೆಂಕಿಗೆ ಸುಟ್ಟು ಹೋಗಿದೆ.

Hubli
ಜನರಲ್ ಸ್ಟೋರ್​ಗೆ ಬೆಂಕಿ

By

Published : Aug 5, 2020, 1:54 PM IST

Updated : Aug 5, 2020, 3:20 PM IST

ಹುಬ್ಬಳ್ಳಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕುಂದಗೋಳ ಪಟ್ಟಣದ ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದೆ.

ಘಟನೆ ತಿಳಿದ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿಂಗನಗೌಡ ಪಾಟೀಲ ಎಂಬುವರಿಗೆ ಸೇರಿದ ಜನರಲ್ ಸ್ಟೋರ್​ಗೆ ಬೆಂಕಿ ಹೊತ್ತಿಕೊಂಡಿದೆ. ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳು ಸೇರಿದಂತೆ ಅಂಗಡಿಯಲ್ಲಿ ಇರಿಸಲಾಗಿದ್ದ ವಿವಿಧ ವ್ಯವಹಾರದ ದಾಖಲೆ ಪತ್ರಗಳ ಸಮೇತ ನಗದು ಬೆಂಕಿಗೆ ಆಹುತಿಯಾಗಿದೆ.

ಶಾರ್ಟ್ ಸರ್ಕ್ಯೂಟ್ ಅವಾಂತರ

ಅಂಗಡಿ ಮಾಲೀಕ ಅಂಗಡಿಯನ್ನು ರಾತ್ರಿ ವೇಳೆ ಬಂದ್ ಮಾಡಿ ಮನೆಗೆ ತೆರಳಿದ 20 ನಿಮಿಷದಲ್ಲೇ ಈ ಘಟನೆ ಜರುಗಿದೆ. ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ಅಂಗಡಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ನಿಂಗನಗೌಡ ಪಾಟೀಲ ದಿಕ್ಕು ತೋಚದಾಗಿದ್ದಾರೆ.

Last Updated : Aug 5, 2020, 3:20 PM IST

ABOUT THE AUTHOR

...view details