ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ಅವಘಡವೊಂದು ಸಂಭವಿಸಿದೆ. ನಗರದ ವೀರಾಪೂರ ಓಣಿಯಲ್ಲಿರುವ ಟಿ.ಕೆ. ಹಬೀಬ ರವಾ ಮಿಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮೊದಲ ಮಹಡಿ ಧಗ ಧಗನೆ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಯಿಂದ ಅಪಾರ ನಷ್ಟ ಸಂಭವಿಸಿದೆ.
ಬೆಂಕಿಯ ಜ್ವಾಲೆ ಹೆಚ್ಚುತ್ತಿರುವುದನ್ನು ಕಂಡು ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗ್ತಿದ್ದು, ಘಟನಾ ಸ್ಥಳದಲ್ಲಿ ತೀವ್ರ ತರಹದ ಹೊಗೆ ಆವರಿಸಿಕೊಂಡಿದೆ.