ಹುಬ್ಬಳ್ಳಿ: ನಿರಂತರ ಮಳೆಯಿಂದಾಗಿ ಜಮೀನಿಗೆ ಹೋಗುವ ರಸ್ತೆ ಹದಗೆಟ್ಟ ಪರಿಣಾಮ ಸ್ವತಃ ರೈತರೇ ಹಣ ಜೋಡಿಸಿ ರಸ್ತೆ ದುರಸ್ತಿ ಮಾಡಿರುವ ಘಟನೆ ಕುಂದಗೋಳ ತಾಲೂಕಿನ ಗುಟೇನಕಟ್ಟಿಯಲ್ಲಿ ನಡೆದಿದೆ.
ಮಳೆಯಿಂದ ಹದಗೆಟ್ಟ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ ರೈತರು.. - ಜೆಸಿಬಿ ಮುಖಾಂತರ ರಸ್ತೆ ದುರಸ್ತಿ
ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ದಾರಿ ಸರಿಪಡಿಸುವಂತೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೈತರೇ ಹಣ ಜೋಡಿಸಿ ಜೆಸಿಬಿ ಮುಖಾಂತರ ರಸ್ತೆ ದುರಸ್ತಿ ಮಾಡಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ಹದಗೆಟ್ಟ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ ರೈತರು..
ಬೆಳೆದ ಬೆಳೆಗಳನ್ನು ಮನೆಗೆ ತರಲು ಆಗದ ಹಿನ್ನೆಲೆ, ರೈತರೇ ಈ ಕಾರ್ಯ ಮಾಡುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಎಲ್ಲಾ ರಸ್ತೆಗಳು ಬಂದ್ ಆಗಿದ್ದವು.
ಅದರಂತೆ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಕ್ಕಪಕ್ಕವಿರುವ ಜಮೀನಿಗೆ ಹೋಗಲು ಸಹ ದಾರಿ ಇಲ್ಲದಂತಾಗಿತ್ತು. ಇದರಿಂದ ಬೇಸತ್ತ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ದಾರಿ ಸರಿಪಡಿಸುವಂತೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೈತರೇ ಹಣ ಜೋಡಿಸಿ ಜೆಸಿಬಿ ಮುಖಾಂತರ ರಸ್ತೆ ದುರಸ್ತಿ ಮಾಡಿಸಿದ್ದಾರೆ.