ಧಾರವಾಡ: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ: ಡೆತ್‌ನೋಟ್ ಬರೆದಿಟ್ಟು ಧಾರವಾಡದ ರೈತ ಆತ್ಮಹತ್ಯೆ - Dharwad crime latest news
ಸಾಲಬಾಧೆ ತಾಳಲಾರದೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ರೈತನೊಬ್ಬ ಮನನೊಂದು, ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತ ಆತ್ಮಹತ್ಯೆ
ತಡಹಾಳ ಗ್ರಾಮದ ಉಮೇಶ ಬಳೂಲಿ (46), ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ. ಇವರು ಎಸ್ಬಿಐ, ಕೆವಿಜಿ ಬ್ಯಾಂಕ್, ಸ್ಥಳೀಯ ಸೊಸೈಟಿ ಸೇರಿ ಇತರೆಡೆ 15 ಲಕ್ಷ ರೂ. ಸಾಲ ಮಾಡಿದ್ದರು. ಸಾಲದ ಬಗ್ಗೆ ಹೆಂಡತಿ ಪದೇ ಪದೆ ಕೇಳಿದ್ದರಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.