ಕರ್ನಾಟಕ

karnataka

ETV Bharat / city

ಹುಟ್ಟುಹಬ್ಬ ಹಿನ್ನೆಲೆ, ವಿನಯ್ ಕುಲಕರ್ಣಿ ಭೇಟಿಗೆ ತೆರಳಿದ ಕುಟುಂಬಸ್ಥರು.. - ಧಾರವಾಡದ ಬಾರಾಕೋಟ್ರಿಯಲ್ಲಿರುವ ನಿವಾಸ

ವಿನಯ್ ಕುಲಕರ್ಣಿ ಮಗಳಾದ ವೈಶಾಲಿ, ದೀಪಾಲಿ, ಪತ್ನಿ ಶಿವಲೀಲಾ, ಮಗ ಹೇಮಂತ್ ಹೊರಟಿದ್ದಾರೆ‌. ಇಂದು ವಿನಯ್ ಕುಲಕರ್ಣಿ ಹುಟ್ಟುಹಬ್ಬ ಹಿನ್ನೆಲೆ ಕೇಕ್ ತೆಗೆದುಕೊಂಡು ಕುಟುಂಬ ಸದಸ್ಯರು ಹೋಗಿದ್ದಾರೆ. ದಿನಕ್ಕೆ ಹತ್ತು ನಿಮಿಷ ಕುಟುಂಬಸ್ಥರ ಭೇಟಿಗೆ ಕೋರ್ಟ್ ಅವಕಾಶ ನೀಡಿದ ಹಿನ್ನೆಲೆ ಕುಟುಂಬಸ್ಥರು ತೆರಳಿದ್ದಾರೆ.

family-members-who-went-to-visit-vinay-kulkarni-news
ಹುಟ್ಟುಹಬ್ಬ ಹಿನ್ನೆಲೆ, ವಿನಯ್ ಕುಲಕರ್ಣಿ ಭೇಟಿಗೆ ತೆರಳಿದ ಕುಟುಂಬಸ್ಥರು..

By

Published : Nov 7, 2020, 5:27 PM IST

ಧಾರವಾಡ:ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆಯಲ್ಲಿರುವ ಹಿನ್ನೆಲೆ, ಕುಲಕರ್ಣಿ ಭೇಟಿ ಮಾಡಲು ಕುಟುಂಬಸ್ಥರು ಬರ್ತ್ ಡೇ ಕೇಕ್ ಜೊತೆ ಹುಬ್ಬಳ್ಳಿ ಹೊರ ವಲಯದ ಸಿಎಆರ್ ಮೈದಾನಕ್ಕೆ ಆಗಮಿಸಿದರು.

ಹುಟ್ಟುಹಬ್ಬ ಹಿನ್ನೆಲೆ, ವಿನಯ್ ಕುಲಕರ್ಣಿ ಭೇಟಿಗೆ ತೆರಳಿದ ಕುಟುಂಬಸ್ಥರು..

ಇಂದು ವಿನಯ್ ಕುಲಕರ್ಣಿ ಜನ್ಮದಿನ ಹಿನ್ನೆಲೆ ಭೇಟಿಗಾಗಿ ಕುಟುಂಬಸ್ಥರಿಗೆ ಸಿಬಿಐ ಅಧಿಕಾರಿಗಳು ಅವಕಾಶ ಕೊಟ್ಟಿದ್ದು, ಧಾರವಾಡದ ಬಾರಾಕೋಟ್ರಿಯಲ್ಲಿರುವ ನಿವಾಸದಿಂದ ಮೂರು ಕಾರುಗಳಲ್ಲಿ ಹೊರಟ ಕುಟುಂಬ ಸದಸ್ಯರು, ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸಿಎಆರ್ ಮೈದಾನದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು‌ ಭೇಟಿ ಮಾಡಲಿದ್ದಾರೆ.

ವಿನಯ್ ಕುಲಕರ್ಣಿ ಮಗಳಾದ ವೈಶಾಲಿ, ದೀಪಾಲಿ, ಪತ್ನಿ ಶಿವಲೀಲಾ, ಮಗ ಹೇಮಂತ್ ಹೊರಟಿದ್ದಾರೆ‌. ಇಂದು ವಿನಯ್ ಕುಲಕರ್ಣಿ ಹುಟ್ಟುಹಬ್ಬ ಹಿನ್ನೆಲೆ "HAPPY BIRTHDAY OUR HERO" ಎಂದು ಬರೆದಿರುವ ಕೇಕ್ ತೆಗೆದುಕೊಂಡು ಕುಟುಂಬ ಸದಸ್ಯರು ಹೋಗಿದ್ದಾರೆ. ದಿನಕ್ಕೆ ಹತ್ತು ನಿಮಿಷ ಕುಟುಂಬಸ್ಥರ ಭೇಟಿಗೆ ಕೋರ್ಟ್ ಅವಕಾಶ ನೀಡಿದ ಹಿನ್ನೆಲೆ ಕುಟುಂಬಸ್ಥರು ತೆರಳಿದ್ದಾರೆ.

ಇನ್ನೂ ಕುಲಕರ್ಣಿ ಬೆಂಬಲಿಗರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲದೇ ಇದೇ ವೇಳೆ ಕೆಲಕಾಲ ಮಾತಿನ‌ ಚಕಮಕಿಯೂ ನಡೆಯಿತು.

ABOUT THE AUTHOR

...view details