ಹುಬ್ಬಳ್ಳಿ: ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದ ವ್ಯಕ್ತಿಗೆ 1,99,998 ರೂ. ವಂಚಿಸಿರುವ ಘಟನೆ (online job fraud) ವಾಣಿಜ್ಯ ನಗರಿಯಲ್ಲಿ ನಡೆದಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇ ಹುಬ್ಬಳ್ಳಿಯ ಎ.ಬಿ. ಯಾದವಾಡ (42) ವಂಚನೆಗೆ ಒಳಗಾದವರು. ಇವರು ನೌಕರಿ ಪಡೆಯಲು ಹಲವು ವೆಬ್‌ಸೈಟ್‌ಗಳಲ್ಲಿ ಹೆಸರು ನೋಂದಾಯಿಸಿದ್ದರು. ನಂತರ ನವೆಂಬರ್ 12ರಂದು ಆದಿತ್ಯ ಶರ್ಮಾ ಎಂದು ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆಮಾಡಿದ್ದರು. ಯಾದವಾಡ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಅದರಲ್ಲಿರುವ ಲಿಂಕ್ ಓಪನ್ ಮಾಡಿ 10 ರೂ. ಹಣ ತುಂಬಿ ಎಲ್ಲ ವಿವರಗಳನ್ನು ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ ಯಾದವಾಡ ಅವರು ಲಿಂಕ್ ಓಪನ್ ಮಾಡಿ ವಿವರಗಳನ್ನು ತುಂಬಿದ್ದರು. ಆಗ ಅವರ ಖಾತೆಯಿಂದ ರೂ.99,998 ಕಡಿತವಾಗಿದೆ.
ಹುಬ್ಬಳ್ಳಿಯಲ್ಲಿ ಉದ್ಯೋಗಕ್ಕಾಗಿ ಆನ್ಲೈನ್ ನೋಂದಣಿ ಮಾಡಿಸಿದ್ದ ವ್ಯಕ್ತಿಯ ಹಣ ದೋಚಿ ವಂಚನೆ.. ಸಾರ್ವಜನಿಕರೇ ಎಚ್ಚರ - online fraud news
ಕೆಲಸ ಪಡೆಯಲು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದ ವ್ಯಕ್ತಿಯಿಂದ 1,99,998 ಲಕ್ಷ ರೂ. ದೋಚಿರುವ ಘಟನೆ (online job fraud) ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಸದ್ಯ ವಂಚನೆ ಅರಿತ ವ್ಯಕ್ತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.
d
ಬಳಿಕ ಯಾದವಾಡ ಅವರು ತಮ್ಮ ಖಾತೆಯಿಂದ ಹಣ ಕಡಿತವಾಗಿರುವ ಕುರಿತು ದೂರಿದಾಗ ಅದಿತ್ಯ ಶರ್ಮಾ, ನಿಮ್ಮ ಹಣ ಖಾತೆಗೆ ಮರಳಿ ಬರುತ್ತದೆ ಎಂದು ಹೇಳಿ ಇನ್ನೊಂದು ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಯಾದವಾಡ ಅವರು ಇನ್ನೊಂದು ನಂಬರ್‌ಗೆ ಕರೆ ಮಾಡಿ ಅವರ ಸೂಚನೆಗಳನ್ನು ಪಾಲಿಸಿದಾಗ ಮತ್ತೇ ಅವರ ಬ್ಯಾಂಕ್ ಖಾತೆಯಿಂದ 99,999 ರೂ. ಹಣ ವರ್ಗಾವಣೆಯಾಗಿದೆ. ಬಳಿಕ ಆ ನಂಬರ್‌ಗೆ ಕರೆ ಮಾಡಿದರೆ ವಂಚಕರು ಫೋನ್ ರಿಸೀವ್ ಮಾಡಲಿಲ್ಲ. ಇದರಿಂದಾಗಿ ತಾವು ವಂಚನೆಗೆ ಒಳಗಾಗಿದ್ದು ತಿಳಿದ ಯಾದವಾಡ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.