ಧಾರವಾಡ: ಪುನೀತ್ ರಾಜ್ಕುಮಾರ್(Puneeth Rajkumar) ಅವರ ಅಕಾಲಿಕ ನಿಧನ ಕೋಟ್ಯಂತರ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ನಿಧನದ ಬಳಿಕ ಕುಟುಂಬಸ್ಥರು ಅಪ್ಪುವಿನ ನೇತ್ರದಾನ(eye donation) ಮಾಡಿರುವುದರಿಂದ ಪ್ರೇರೇಪಣೆಗೊಂಡ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ (MLA Amrut Desai) ತಮ್ಮ ಜನ್ಮ ದಿನದಂದು(ಇಂದು) ನೇತ್ರದಾನ ಮಾಡಿದರು.
ಧಾರವಾಡದ ನರೇಂದ್ರ ಕ್ರಾಸ್ ಬಳಿಯಿರುವ ಹಾಲ್ ವೊಂದರಲ್ಲಿ ಅಮೃತ್ ದೇಸಾಯಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಮರಣಾನಂತರ ನೇತ್ರದಾನ ಮಾಡುವುದಾಗಿ ಶಾಸಕ ಅಮೃತ್ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ಸಹಿ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಶಾಸಕ ಅಮೃತ್ ದೇಸಾಯಿ ನೇತ್ರದಾನ ಮಾಡಿರುವುದರಿಂದ ಪ್ರೇರೇಪಣೆಗೊಂಡು ಅವರ 210 ಅಭಿಮಾನಿಗಳು ನೇತ್ರದಾನ ಹಾಗೂ 71 ಜನರು ಇಂದು ರಕ್ತದಾನ ಮಾಡಿದ್ದಾರೆ.