ಕರ್ನಾಟಕ

karnataka

ETV Bharat / city

'ಲವ್​ ಮ್ಯಾರೇಜ್​ ಆದರೆ ಹೀಗೇ ಆಗೋದು'... ಜೆಡಿಎಸ್, ಬಿಜೆಪಿ ಮೈತ್ರಿ ಬಗ್ಗೆ ಕೋನರೆಡ್ಡಿ ಅಸಮಾಧಾನ

ಸಿದ್ದರಾಮಯ್ಯ ಹಾಗೂ ಕುಮಾರಣ್ಣನ ಸಮಸ್ಯೆ ಬಗೆ ಹರಿಯುವ ಲಕ್ಷಣ ಇಲ್ಲ. ಬಿಜೆಪಿ ಜತೆ ಮೈತ್ರಿ ಬಗ್ಗೆ ವೈಯಕ್ತಿಕ ವಿರೋಧವಿದೆ‌ ಎಂದು ಕೋನರೆಡ್ಡಿ ಅಸಮಾಧಾನ ಹೊರ ಹಾಕಿದರು.

ex mla NH Konareddy
ಕೋನರೆಡ್ಡಿ

By

Published : Dec 19, 2020, 6:03 PM IST

ಹುಬ್ಬಳ್ಳಿ:ಒಂದು ವರ್ಷದ ಬಳಿಕ ಸಿದ್ದರಾಮಯ್ಯಗೆ ತಮ್ಮ ಸೋಲಿನ ಬಗ್ಗೆ ಜ್ಞಾನೋದಯ ಆಗಿದೆ. ಬಹಳ ದೊಡ್ಡ ನಾಯಕರ ಬಗ್ಗೆ ನಾನೇನೂ ಹೇಳೋದಿಲ್ಲ. ಲವ್ ಮ್ಯಾರೇಜ್ ಆದರೆ ಹೀಗೆ ಆಗೋದು ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಸರ್ಕಾರ ಮೈತ್ರಿ ಬಗ್ಗೆ ಕೋನರೆಡ್ಡಿ ಲೇವಡಿ

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಸೇರಿ ಮದುವೆ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಹೊಸ ಬೀಗತನದ ಬಗ್ಗೆ ಚಿಂತನೆ ನಡೆದಿದೆ‌ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದರು. ಸಿದ್ದರಾಮಯ್ಯ ಹಾಗೂ ಕುಮಾರಣ್ಣನ ಸಮಸ್ಯೆ ಬಗೆ ಹರಿಯುವ ಲಕ್ಷಣ ಇಲ್ಲ ಎಂದ ಅವರು, ಬಿಜೆಪಿ ಜತೆ ಮೈತ್ರಿ ಬಗ್ಗೆ ವೈಯಕ್ತಿಕ ವಿರೋಧವಿದೆ‌ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ದೇವೇಗೌಡರು, ಕುಮಾರಣ್ಣ ನಿರ್ಧಾರ ತೆಗೆದುಕೊಳ್ಳುತ್ತಾರೆ. 2005-06ರಲ್ಲಿ ಮೈತ್ರಿ ಸುಗಮವಾಗಿಯೇ ಇತ್ತು ಎಂದು ಕೊನರೆಡ್ಡಿ ಹೇಳಿದರು.

ABOUT THE AUTHOR

...view details