ಹುಬ್ಬಳ್ಳಿ: ಯಾರೂ ಕೊರೊನಾದಿಂದ ಭಯಪಡುವ ಅವಶ್ಯಕತೆ ಇಲ್ಲ. 10 ದಿನಗಳ ಕಾಲ ಆರೋಗ್ಯ ಕಾಳಜಿ ಜೊತೆಗೆ ಸರಿಯಾದ ಚಿಕಿತ್ಸೆ ಪಡಿದರೆ ಕೊರೊನಾ ಗೆಲ್ಲಬಹುದು ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುದೀರ್ ಸರಾಫ ಕೊರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಕೊರೊನಾದಿಂದ ಭಯಪಡಬೇಡಿ: ಹು-ಧಾರವಾಡ ಪಾಲಿಕೆ ಮಾಜಿ ಮೇಯರ್ - ಕಿಮ್ಸ್ ಆಸ್ಪತ್ರೆ
ಜುಲೈ 6ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಹು - ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುದೀರ್ ಸರಾಫ ಕೊರೊನಾದಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ex mayor
ಈ ಕುರಿತು ವಿಡಿಯೋ ಮಾಡಿರುವ ಅವರು, ಬಿಸಿ ನೀರು, ಕಷಾಯ ಕುಡಿದರೆ ಕೊರೊನಾದಿಂದ ಮುಕ್ತವಾಗಬಹುದು. ಕಿಮ್ಸ್ನಲ್ಲಿ ಉತ್ತಮ ಚಿಕಿತ್ಸೆ ಜೊತೆಗೆ ವೈದ್ಯರು ಅತಿ ಕಾಳಜಿ ವಹಿಸುತ್ತಿದ್ದಾರೆ. ಒಳ್ಳೆಯ ಊಟದ ವ್ಯವಸ್ಥೆ ಕೂಡಾ ಇದೆ. ಯಾರೂ ಸುಳ್ಳು ಸುದ್ದಿಗೆ ಕಿವಿ ಕೊಡಬಾರದು ಎಂದು ಹೇಳಿದರು.
ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ಜನರಿಗೆ ಧೈರ್ಯ ತುಂಬಿದ್ದಾರೆ. ಇವರಿಗೆ ಜುಲೈ 6 ರಂದು ಸೋಂಕು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಅವರು, ಕೊರೊನಾ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.