ಹುಬ್ಬಳ್ಳಿ:ಕೊರೊನಾ ಅಟ್ಟಹಾಸಕ್ಕೆ ಸಿಲುಕಿ ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದ ಯುವತಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ದಿನಬಳಕೆ ಆಹಾರ ಸಾಮಗ್ರಿ ಕಿಟ್ ಹಾಗೂ ತರಕಾರಿ ಒದಗಿಸಿದೆ.
ಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ರೇಣುಕಾ ಹೊಸಮನಿ ಎನ್ನುವ ಯುವತಿ 2017ರಲ್ಲಿ ಕೈಕಾಲು ಸ್ವಾಧೀನ ಕಳೆದುಕೊಂಡ ಕಾರಣ ಬಲಗೈ 4 ಬೆರಳು ಸೇರಿದಂತೆ ಪಾದವನ್ನ ಸಹ ತುಂಡರಿಸಲಾಗಿದೆ.
ಆಹಾರ ಸಾಮಗ್ರಿ ಕಿಟ್ ವಿತರಣೆ ಅಂದು ವೈದ್ಯರ ಎಡವಟ್ಟನಿಂದ ಇಂದಿಗೂ ಯುವತಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಏಕಾಂಗಿ ಜೀವನ ನಡೆಸುತ್ತಿರುವ ಅವರು ಈಗ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ...ಮರುಕ ಹುಟ್ಟಿಸುವಂತಿದೆ ಈ ದಿವ್ಯಾಂಗ ಯುವತಿಯ ಜೀವನದ ವ್ಯಥೆ: ಸಹಾಯ ಹಸ್ತ ಚಾಚುವಿರಾ?
ಯುವತಿ ಸಮಸ್ಯೆ ಕುರಿತು ಈಟಿವಿ ಭಾರತವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರು ದಿನಬಳಕೆಗೆ ಬೇಕಾದ ಆಹಾರ ಸಾಮಗ್ರಿ ಕಿಟ್ ಜೊತೆಗೆ ತರಕಾರಿಯನ್ನು ತಮ್ಮ ಸಿಬ್ಬಂದಿ ಮೂಲಕ ತಲುಪಿಸಿದ್ದಾರೆ. ಅಲ್ಲದೇ, ಯುವತಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ.