ಕರ್ನಾಟಕ

karnataka

ETV Bharat / city

ಈಟಿವಿ ಭಾರತ ಫಲಶೃತಿ : ತಿಮ್ಮಸಾಗರ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿದ ಅಧಿಕಾರಿಗಳು - hubli

ವಿದ್ಯುತ್ ಇಲ್ಲದೆ ಜೀವನ ಸಾಗಿಸುತ್ತಿದ್ದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಹೀಗಾಗಿ, ಗ್ರಾಮದ ನಿವಾಸಿಗಳು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ..

Officer provide electricity
ತಿಮ್ಮಸಾಗರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ

By

Published : Aug 14, 2021, 9:21 PM IST

ಹುಬ್ಬಳ್ಳಿ :ತಾಲೂಕಿನ ಅಗ್ರಹಾರ ತಿಮ್ಮಸಾಗರ ಗ್ರಾಮದ ನಿವಾಸಿಗಳಿಗೆ ಅಂಚಟಗೇರಿ ಗ್ರಾಮ ಪಂಚಾಯತ್ ಸದಸ್ಯ ಸಹದೇವಪ್ಪ ಮಾಳಗಿ ಎಂಬುವರು ಗ್ರಾಮಸ್ಥರನ್ನು ನಿತ್ಯವೂ ಇಲ್ಲಿನ ಜಾಗವನ್ನು ಬಿಟ್ಟು ಹೋಗಿ ಎಂದು ಹೇಳುತ್ತಿದ್ದರು.

ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ ತಿಮ್ಮಸಾಗರ ಗ್ರಾಮದ ಜನತೆ..

ಈ ಬಗ್ಗೆ ಈಟಿವಿ ಭಾರತ 'ನೀವು ನನಗೆ ವೋಟ್​​ ಹಾಕಿಲ್ಲ: ಊರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ!'ಎಂಬ ಶೀರ್ಷಿಕೆಯಡಿ ಸವಿಸ್ತಾರವಾಗಿ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಮೇಲಾಧಿಕಾರಿಗಳು, ಆತನಿಗೆ ಬುದ್ಧಿ ಹೇಳುವುದರ ಜೊತೆಗೆ ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಮುಂದಾಗಿದ್ದಾರೆ.

ವಿದ್ಯುತ್ ಇಲ್ಲದೆ ಜೀವನ ಸಾಗಿಸುತ್ತಿದ್ದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಹೀಗಾಗಿ, ಗ್ರಾಮದ ನಿವಾಸಿಗಳು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:ನೀವು ನನಗೆ ವೋಟ್​​ ಹಾಕಿಲ್ಲ: ಊರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ!

ABOUT THE AUTHOR

...view details