ಕರ್ನಾಟಕ

karnataka

ETV Bharat / city

ಹೊಳೆಯುವ ಕಲ್ಲನ್ನೇ ಚಿನ್ನವೆಂದು ಮಾರಲು ಯತ್ನಿಸಿದ ಆರೋಪಿ ಬಂಧನ, ವಿಚಾರಣೆ ವೇಳೆ ಸಿಕ್ತು ಟ್ವಿಸ್ಟ್​ - ವಿಕಿರಣ ಸೂಸುವ ವಸ್ತು

ಇಲೆಕ್ಟ್ರಿಕ್‌ ಕೆಲಸ (Electric Worker) ಮಾಡಿಕೊಂಡಿರುವ ಮೌನೇಶ, ದುರ್ಗದ ಬೈಲ್‌ಗೆ ಬಂದಿದ್ದರು. ಹೊಳೆಯುವ ಕಲ್ಲುಗಳನ್ನು(Shiny stone) ತಂದು ಇದರಲ್ಲಿ ಬಂಗಾರ (Gold) , ಬೆಳ್ಳಿ (Silver) ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

ಹೊಳೆಯುವ ಕಲ್ಲುಗಳನ್ನು ಚಿನ್ನವೆಂದು ಮಾರಲು ಯತ್ನಿಸಿದ ಆರೋಪಿ ಬಂಧನ
ಹೊಳೆಯುವ ಕಲ್ಲುಗಳನ್ನು ಚಿನ್ನವೆಂದು ಮಾರಲು ಯತ್ನಿಸಿದ ಆರೋಪಿ ಬಂಧನ

By

Published : Nov 10, 2021, 5:41 PM IST

ಹುಬ್ಬಳ್ಳಿ: ಇಲ್ಲಿನ ದುರ್ಗದ ಬೈಲ್‌ನಲ್ಲಿ ಹೊಳೆಯುವ ಕಲ್ಲುಗಳನ್ನು(Shiny stones) ತಂದು ಇದರಲ್ಲಿ ಬಂಗಾರ (Gold) ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿತನಿಂದ 1.35 ಲಕ್ಷ ರೂ. ಮೌಲ್ಯದ 1039 ಗ್ರಾಂ ತೂಕದ 9 ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪಅರ್ಕಾಚಾರಿ ಬಂಧಿತ ಆರೋಪಿ.

ಇಲೆಕ್ಟ್ರಿಕ್ ಕೆಲಸ ಮಾಡಿಕೊಂಡಿರುವ ಮೌನೇಶ, ದುರ್ಗದ ಬೈಲ್‌ಗೆ ಬಂದಿದ್ದರು. ಹೊಳೆಯುವ ಕಲ್ಲುಗಳನ್ನು ತಂದು ಇದರಲ್ಲಿ ಬಂಗಾರ (Gold) , ಬೆಳ್ಳಿ (Silver) ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

ಇದು ಕ್ಯಾಲಿಫೋರ್ನಿಯಂ:

ಆ ಕಲ್ಲನ್ನು ಆರೋಪಿ ‘ಕ್ಯಾಲಿಫೋರ್ನಿಯಂ’(Californium) ಎಂದು ಹೇಳುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಆಯುಕ್ತರು, ಅದು ರೇಡಿಯೋ ಆ್ಯಕ್ಟಿವ್​ ಮಟಿರಿಯಲ್ ಅಂದರೆ ವಿಕಿರಣ ಸೂಸುವ ವಸ್ತು (Californium is a radioactive chemical element) ಅದನ್ನು ಬರಿಗೈಲಿ ಮುಟ್ಟಬೇಡಿ. ಮರಳಿನಲ್ಲಿ ಮುಚ್ಚಿ ಇಡಿ ಎಂದು ಸಿಬ್ಬಂದಿಗೆ ಸೂಚಿಸಿದ್ದರು.

1 ಗ್ರಾಂಗೆ 17 ಕೋಟಿ ರೂ.:

ಕ್ಯಾಲಿಫೋರ್ನಿಯಂ (Californium) ಎಂಬುದು ರೇಡಿಯೋ ಆ್ಯಕ್ಟಿವ್​ ಮಟಿರಿಯಲ್ ಅಂದರೆ ವಿಕಿರಣ ಸೂಸುವ ವಸ್ತು (Radioactive chemical element). ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣ ಶೀಲ ಲೋಹ. ಇದು ಯುರೇನಿಯಂ (Uranium) ನಂತರ ಅತಿ ಹೆಚ್ಚು ಪರಮಾಣು (Nuclear Number) ಸಂಖ್ಯೆಯನ್ನು ಹೊಂದಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯ ಮೌಲ್ಯ (Market Value) ಹೆಚ್ಚಾಗಿದೆ.

ಇದನ್ನು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್​ನಂಥ (Cancer) ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ (Loss of vision) ಆಗುವ ಸಾಧ್ಯತೆ ಇದೆ.

1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾರೆನ್ಸ್​ ರ್ಬಕೆಲಿ ನ್ಯಾಷನಲ್​ ಲ್ಯಾಬೋರೇಟರಿಯಲ್ಲಿ (Lawrence Berkeley National Laboratory) ಇದನ್ನು ಸಂಶೋಧಿಸಲಾಗಿತ್ತು. ಹಾಗಾಗಿ, ಇದಕ್ಕೆ ಕ್ಯಾಲಿಪೋರ್ನಿಯಂ (Californium) ಎಂದು ನಾಮಕರಣ ಮಾಡಲಾಗಿದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ. ಎನ್ನಲಾಗುತ್ತಿದೆ.

ಕ್ವಾರಿಯಲ್ಲಿ ಸಿಕ್ಕ ಕಲ್ಲುಗಳು:

ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು(Shiny stone) ಸಿಕ್ಕಿದ್ದವು ಎಂದು ಮೌನೇಶ ಹೇಳಿದ್ದಾರೆ. ಶಹರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಟ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಹಿಳಾ ಕ್ಯಾಬಿನ್ ಸಿಬ್ಬಂದಿ ಬಂಧನ

For All Latest Updates

ABOUT THE AUTHOR

...view details