ಧಾರವಾಡ: ಅಣ್ಣ ತಮ್ಮಂದಿರಿಬ್ಬರು ಜಗಳವಾಡುತ್ತಿದ್ದಾಗ ಅಣ್ಣ ಹೊಡೆದ ಹೊಡೆತಕ್ಕೆ ತಮ್ಮ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.
ಅತ್ತಿಗೆ ಜೊತೆ ಜಗಳವಾಡಿದನೆಂದು ತಮ್ಮನನ್ನೇ ಕೊಂದ ನಿರ್ದಯಿ ಅಣ್ಣ.. - fight between two brothers
ಅಣ್ಣ ತಮ್ಮಂದಿರಿಬ್ಬರೂ ಜಗಳವಾಡುತ್ತಿದ್ದಾಗ ಅಣ್ಣ ಹೊಡೆದ ಹೊಡೆತಕ್ಕೆ ತಮ್ಮ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.
ತಮ್ಮನನ್ನೇ ಹೊಡೆದು ಸಾಯಿಸಿದ ಅಣ್ಣ
ಆತ್ಮಾನಂದ (24) ಸಾವನ್ನಪ್ಪಿದ ಯುವಕ. ಆತ್ಮಾನಂದ, ಸಹೋದರ ಶಿವಾನಂದ ಪತ್ನಿ ಜೊತೆಗೆ ಜಗಳವಾಡುವಾಗ, ಕೊಪಗೊಂಡ ಆತನ ಅಣ್ಣ ಶಿವಾನಂದ, ತಮ್ಮನ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ್ಮಾನಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ಸದ್ಯಕ್ಕೆ ಶಿವಾನಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ತನಿಖೆಗೊಳಪಡಿಸಿದ್ದಾರೆ.