ಹುಬ್ಬಳ್ಳಿ :ನೂತನ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಔಷಧೀಯ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.
ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಪರಿಸರ ದಿನಾಚರಣೆ, ಪ್ರತಿಜ್ಞೆ ಸ್ವೀಕಾರ - pledge acceptance at Hubli New Court Complex
ಹೈಕೋರ್ಟ್ ನಿರ್ದೇಶನದ ಮೇರೆಗೆ ಕೋರ್ಟ್ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಗಿದೆ. ಪ್ರತಿ ವರ್ಷವೂ ಗಿಡಗಳನ್ನು ನೆಡುವಂತೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕಾರ ಮಾಡಲಾಗಿದೆ.
![ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಪರಿಸರ ದಿನಾಚರಣೆ, ಪ್ರತಿಜ್ಞೆ ಸ್ವೀಕಾರ Eco Day celebration, pledge acceptance at Hubli New Court Complex](https://etvbharatimages.akamaized.net/etvbharat/prod-images/768-512-7490292-217-7490292-1591369184348.jpg)
ಇದೇ ವೇಳೆ ಮಾತನಾಡಿದ ಫಸ್ಟ್ ಎಡಿಷನಲ್ ಜಿಲ್ಲಾ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ, ಹೈಕೋರ್ಟ್ ನಿರ್ದೇಶನದ ಮೇರೆಗೆ ಕೋರ್ಟ್ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಗಿದ್ದು, ಪ್ರತಿ ವರ್ಷವೂ ಗಿಡಗಳನ್ನು ನೆಡುವಂತೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕಾರ ಮಾಡಲಾಗಿದೆ ಎಂದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಎಲ್ಲರೂ ಕೂಡ ಗಿಡಗಳನ್ನು ಹಚ್ಚಿ ಬೆಳೆಸುವ ಮೂಲಕ ದೇಶದ ಪರಿಸರ ಸಂಪತ್ತನ್ನು ವೃದ್ಧಿಸಬೇಕು ಎಂದರು.
ಹುಬ್ಬಳ್ಳಿ ನ್ಯಾಯಾಲಯದ ನ್ಯಾಯಾಧೀಶರುಗಳಾದ ಕೆ ಎನ್ ಗಂಗಾಧರ, ಜಿ ಎ ಮೂಲಿಮನಿ, ಸುಮಂಗಲಾ ಬಸಣ್ಣವರ, ಸಂಜಯಗುಡಗುಡಿ, ರವೀಂದ್ರ ಪಲ್ಲೇದ್, ಕುಮಾರಿ ಸುಜಾತ, ಎಂ ಕೆ ನಾಗರಾಜಪ್ಪ, ಪಿ ಮಾದೇಶ್, ದೀಪಾ ಮನೇರಕರ್, ದೀಪ್ತಿ ನಾಡಗೌಡ, ಶಕುಂತಲಾ, ಹೆಚ್ ಟಿ ಅನುರಾಧಾ, ಪುಷ್ಪಾ ಜೋಗೋಜಿ, ವಿಶ್ವನಾಥ ಮುಗತಿ, ವಶುಶಾಂತ ಚೌಗಲಾ, ವಕೀಲ ಸಂಘದ ಅಧ್ಯಕ್ಷ ಅಶೋಕ ಬಳೆಗಾರ, ಗುರು ಹಿರೇಮಠ, ಎಸ್ ಪಿ ಕೊಪ್ಪರ ಸೇರಿದಂತೆ ಇತರರು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕಾರ ಮಾಡಿದರು.