ಕರ್ನಾಟಕ

karnataka

ETV Bharat / city

ಹೆಚ್​​ಡಿಕೆಗೆ 'ಕೈ' ಜೋಡಿಸೋದು ಬೇಡ ಅಂತ ಮೊದಲೇ ಹೇಳಿದ್ದೆವು: ಹೊರಟ್ಟಿ - ಮೈತ್ರಿ ಸರ್ಕಾರ ಪತನದ ಕುರಿತು ಬಸವರಾಜ ಹೊರಟ್ಟಿ ಹೇಳಿಕೆ

ಸರ್ಕಾರ ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್​ ಜೊತೆ ಕೈಜೋಡಿಸುವುದು ಬೇಡ, ಸ್ವಲ್ಪ ತಡೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹೇಳಿದ್ದೇವು ಎಂದು ಮೈತ್ರಿ ಸರ್ಕಾರ ಪತನದ ಕುರಿತು ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

earlier we said to hd kumaraswamy not to allied with Congress
ಬಸವರಾಜ ಹೊರಟ್ಟಿ

By

Published : Dec 5, 2020, 7:02 PM IST

ಧಾರವಾಡ: ಹೆಚ್​.ಡಿ.ಕುಮಾರಸ್ವಾಮಿಯವರಿಗೆ ಕಾಂಗ್ರೆಸ್​​ ಜೊತೆ ಕೈಜೋಡಿಸೋದು ಬೇಡ. ಕೊಂಚ ತಡೆದುಕೊಳ್ಳಿ ಅಂತ ಮೊದಲೇ ಹೇಳಿದ್ದೆವು. ಸಿದ್ದರಾಮಯ್ಯನವರು ಜೆಡಿಎಸ್ ಮುಗಿಸೋದು ನನ್ನ ಕೆಲಸ ಅಂದಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಬಸವರಾಜ ಹೊರಟ್ಟಿ, ವಿಧಾನ ಪರಿಷತ್​ ಸದಸ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೋಸ್ತಿ ಸರ್ಕಾರದಲ್ಲಿ ಸಿದ್ದು-ಹೆಚ್​ಡಿಕೆ ಜೊತೆಯಾಗಿ ಕೂತು ಮಾತನಾಡುವ ಸ್ಥಿತಿ ನಿರ್ಮಾಣವಾಗಲಿಲ್ಲ, ಸಮನ್ವಯತೆಯಿಂದ ಹೋಗಬೇಕಿತ್ತು. ಆದರೆ ಇದು ಒತ್ತಾಯದ ಮದುವೆ ಆದಂತಾಯಿತು ಎಂದು‌ ಸಮ್ಮಿಶ್ರ ಸರ್ಕಾರದ ದಿನಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ: 'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್​ಡಿಕೆ ಹೀಗೆ ಹೇಳಿದ್ಯಾಕೆ?

ಲೋಕಸಭಾ ಚುನಾವಣೆಯಲ್ಲಿ ಎಂಟು ಸೀಟು ತೆಗೆದುಕೊಳ್ಳುವಂತೆ ಬಿಜೆಪಿಯಿಂದ ಆಫರ್ ಬಂದಿತ್ತು. ಸಿಎಂ ಆಗಿ ಮುಂದುವರೆಯಲು ಹೇಳಿದ್ದರು. ಜಾತ್ಯಾತೀತ ನಿಲುವು ಹಿನ್ನೆಲೆ ದೇವೇಗೌಡರು ಬಿಜೆಪಿ ಜೊತೆ ಕೈಜೋಡಿಸುವುದು ಬೇಡ ಅಂದಿದ್ದರು. ಗೌಡರು ಏನೇ ಹೇಳಿದರು ಅದರಲ್ಲಿ ಆದರ್ಶವಿರುತ್ತೆ. ಆದರೆ ಇವರೆಲ್ಲ ಗೌಡರನ್ನೂ ಟೀಕೆ ಮಾಡುತ್ತಾರೆ ಎಂದು ಬೆಸರ ವ್ಯಕ್ತಪಡಿಸಿದರು.

ಜನವರಿಯಿಂದ ಬದಲಾವಣೆ ಎಂಬ ಹೆಚ್​​ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಏನೇ ಹೇಳಿದರೂ ಸತ್ಯವಿರುತ್ತೆ. ಅವರು ಎಲ್ಲವನ್ನು ತಿಳಿದುಕೊಂಡೇ ಹೇಳಿರುತ್ತಾರೆ. ಬಿಜೆಪಿಯಲ್ಲಿ 105 ಮತ್ತು 17ರ ಮಧ್ಯೆ ತಿಕ್ಕಾಟ ನಡೆದಿದೆ.‌ 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದೆ. ಅವರಿಗೆಲ್ಲ ಮಂತ್ರಿ ಸ್ಥಾನ ಕೊಡಬೇಕಾಗುತ್ತೆ ಎಂದು ಹೇಳಿದರು.

ವಿಶ್ವನಾಥರಿಂದ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಅವರು ಆರೋಪ‌ ಮಾಡಿರೋದು ಸಹಜ ಎಂದು ಸಮರ್ಥಿಸಿಕೊಂಡರು.

ABOUT THE AUTHOR

...view details