ಹುಬ್ಬಳ್ಳಿ: ಕರ್ತವ್ಯ ಲೋಪ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಪೊಲೀಸರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಗಣೇಶ ಮೆರವಣಿಗೆ ವೇಳೆ ಕರ್ತವ್ಯ ಲೋಪ: 16 ಪೊಲೀಸರಿಗೆ ಬಿಸಿ ಮುಟ್ಟಿಸಿದ ಆಯುಕ್ತರು - ಹುಬ್ಬಳ್ಳಿಯ ಗಣೇಶ ಮೆರವಣಿಗೆ
ಸೆ.12 ರಂದು ಹುಬ್ಬಳ್ಳಿಯ ಗಣೇಶ ಮೆರವಣಿಗೆ ವೇಳೆ ಸರಣಿ ಚಾಕು ಇರಿತ ಪ್ರಕರಣ ಸಂಬಂಧ ಹಾಗೂ ಕರ್ತವ್ಯಲೋಪದ ಆರೋಪದ ಮೇಲೆ 16 ಜನ ಪೊಲೀಸರನ್ನ ಅಮಾನತು ಮಾಡಿ ಹು-ಧಾ ಪೊಲೀಸ್ ಆಯುಕ್ತ ಆರ್ ದಿಲೀಪ್ ಆದೇಶ ಹೊರಡಿಸಿದ್ದಾರೆ.
ಸೆ.12 ರಂದು ಹುಬ್ಬಳ್ಳಿಯ ಗಣೇಶ ಮೆರವಣಿಗೆ ವೇಳೆ ಸರಣಿ ಚಾಕು ಇರಿತ ಪ್ರಕರಣ ಸಂಬಂಧ ಹಾಗೂ ಕರ್ತವ್ಯಲೋಪದ ಆರೋಪದ ಮೇಲೆ 16 ಜನ ಪೊಲೀಸರನ್ನ ಅಮಾನತು ಮಾಡಿ ಆಯುಕ್ತ ಆರ್.ದಿಲೀಪ್ ಆದೇಶ ಹೊರಡಿಸಿದ್ದಾರೆ.
ಗಣೇಶ ಮೆರವಣಿಗೆ ವೇಳೆ ಒಂದೇ ರಾತ್ರಿ 9 ಕಡೆ ಚಾಕು ಇರಿತ ಘಟನೆ ನಡೆದು ಓರ್ವ ನರ್ಸಿಂಗ್ ವಿದ್ಯಾರ್ಥಿಯ ಹತ್ಯೆಯಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ಹಿನ್ನೆಲೆ ಅಮಾನತು ಮಾಡಲಾಗಿದ್ದು, ಆಯುಕ್ತರ ಖಡಕ್ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ಹುಬ್ಬಳ್ಳಿಯ ಶಹರ ಠಾಣೆ ಹಾಗೂ ಬೆಂಡಿಗೇರಿ ಠಾಣೆ ಇನ್ಸಪೆಕ್ಟರ್ಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ.