ಹುಬ್ಬಳ್ಳಿ:ನಗರದ ಮಾವನೂರ ರಸ್ತೆಯಲ್ಲಿ ಕೆಂಪು ಬಣ್ಣದ ಬ್ಯಾಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನ ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬೀದರ ತಾಲೂಕಿನ ಮರ್ಖಲ ಗ್ರಾಮದ ಸಲೀಂಮೀಯಾ ಮಹ್ಮದಹುಸೇನ ಮೌಜನ್, ರಮೇಶ ಮಾಣಿಕ ಕೊರವಾ, ಹುಬ್ಬಳ್ಳಿ ವಿಕಾಸನಗರದ ಸಿದ್ಧಲಿಂಗೇಶ್ವರನಗರದ ಸಿದ್ದಾರ್ಥ ಮೇಘರಾಜ ಹಬೀಬ, ಹಳೇಹುಬ್ಬಳ್ಳಿ ನೇಕಾರನಗರದ ಶಿಂಧೆ ಪ್ಲಾಟಿನ ಲಿಂಗೇಶಗೌಡ ಮುತ್ತನಗೌಡ ಪಾಟೀಲ ಹಾಗೂ ಗಣೇಶ ಕಾಲೋನಿಯ ಮಹೇಶ ಈರನಗೌಡ ಪಾಟೀಲ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟಗಾರರ ಬಂಧನ! - ಡ್ರಗ್ಸ್ ಪ್ರಕಟಣ
ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
![ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟಗಾರರ ಬಂಧನ! ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ](https://etvbharatimages.akamaized.net/etvbharat/prod-images/768-512-10642729-532-10642729-1613428046982.jpg)
ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ
ಬಂಧಿತರಿಂದ 97550 ಮೌಲ್ಯದ 8ಕೆಜಿ 495 ಗ್ರಾಂ ಗಾಂಜಾ, 5 ಮೊಬೈಲ್ ಹಾಗೂ 550 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಇನ್ಸಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪಿಎಸ್ಐ ಎಸ್.ಜಿ.ಕಾನಟ್ಟಿ, ಎಂ.ಎಸ್.ಕುರಹಟ್ಟಿ, ಸಿ.ಎಂ.ಕಂಬಾಳಿಮಠ, ಎಂ.ಹೆಚ್.ಹಾಲಾವರ, ಎ.ಎಂ.ತಹಶೀಲ್ದಾರ, ಪಿ.ಕೆ.ಬಿಕ್ಕನಗೌಡರ, ಗಿರೀಶ ಬಡಿಗೇರ, ರವಿ ಕೋಳಿ, ಫಕ್ಕಿರೇಶ ಸುಣಗಾರ, ಜಯಶ್ರೀ ಚಿಲ್ಲೂರ ಅವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.