ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಗೂ ಹರಡಿದ ಗಾಂಜಾ ಗಾಟು! ಡ್ರಗ್ಸ್​ ಸೇವನೆ ಆರೋಪದಲ್ಲಿ 4 ವಿದ್ಯಾರ್ಥಿಗಳ ವಶ - ಹುಬ್ಬಳ್ಳಿ ಕ್ರೈಂ ಸುದ್ದಿ

ಗಾಂಜಾ ಮಾರಾಟಗಾರ ದಾದಾ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಯುವಕರು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎ ವ್ಯಾಸಂಗ ಮಾಡುತ್ತಿದ್ದರು ಎಂಬುದು ಕಳವಳಕಾರಿ ಅಂಶವಾಗಿದೆ..

drug-case-4-students-arrest-in-hubli
ಡ್ರಗ್ಸ್​ ಸೇವಿಸುತ್ತಿದ್ದ 4 ವಿದ್ಯಾರ್ಥಿಗಳ ವಶ: ಹುಬ್ಬಳ್ಳಿಗೂ ಹರಡಿದ ಗಾಂಜಾ ಗಾಟು!

By

Published : Nov 2, 2021, 12:33 PM IST

ಹುಬ್ಬಳ್ಳಿ :ದೇಶ ಸೇರಿದಂತೆ ರಾಜ್ಯದಲ್ಲಿ ಗಾಂಜಾ ಸೇವನೆ ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಗಾಂಜಾ ಗಾಟು ಈಗ ಹುಬ್ಬಳ್ಳಿಗೂ ಹರಡಿದಂತಿದೆ. ಇಲ್ಲಿನ ತೋಳನಕೆರೆ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.

ಅಲ್ಲದೇ, ಆರೋಪಿತರಿಂದ 75 ಗ್ರಾಂ ಗಾಂಜಾ, ಸೇವನೆಗೆ ಬಳಸುತ್ತಿದ್ದ ವಸ್ತುಗಳು ಹಾಗೂ 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ರಬಕವಿಯ ದಾದಾ ಎಂಬಾತನ ಬಳಿ ಗಾಂಜಾ ಖರೀದಿಸಿದ್ದ ಯುವಕರು, ತೋಳನಕೆರೆಯ ಬಳಿ ಗಾಂಜಾ ಸೇವಿಸುತ್ತಿದ್ದರು.

ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ಜೆ ಎಂ ಕಾಲಿಮಿರ್ಚಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಾಂಜಾ ಮಾರಾಟಗಾರ ದಾದಾ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಯುವಕರು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎ ವ್ಯಾಸಂಗ ಮಾಡುತ್ತಿದ್ದರು ಎಂಬುದು ಕಳವಳಕಾರಿ ಅಂಶವಾಗಿದೆ.

ABOUT THE AUTHOR

...view details