ಹುಬ್ಬಳ್ಳಿ: ತಾಲೂಕಿನ ಸುತ್ತಮುತ್ತಲಿನ ಜಮೀನುಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾದರೆ ಸಾಕು ರಾಜಾರೋಷವಾಗಿ ಮದ್ಯ ಸೇವಿಸುತ್ತಾ ಎಲ್ಲೆಂದರಲ್ಲಿ ಮದ್ಯದ ಪ್ಯಾಕೇಟ್ಗಳನ್ನು ಎಸೆದು ಹೋಗುತ್ತಿದ್ದಾರೆ.
ಮದ್ಯ ಸೇವನೆಗೆ ಅಡ್ಡಗಳಾಗುತ್ತಿವೆ ಜಮೀನುಗಳು, ರೈತರಿಗೆ ಕಿರಿಕಿರಿ - throwing drinking packet in land
ಹುಬ್ಬಳ್ಳಿ ತಾಲೂಕಿನ ಸುತ್ತಮುತ್ತ ಜಮೀನುಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಮದ್ಯ ಸೇವಿಸಿ ಕುಡುಕರು ರೈತರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಹೀಗಾಗಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ರೈತರು ಮನವಿ ಮಾಡಿದ್ದಾರೆ.
ಮಳೆಯಾದರೆ ಬೆಳೆ, ಬೆಳೆಯಾದರೆ ಮಳೆ ಕೈಕೊಡುತ್ತದೆ. ಇಂತಹ ಸಂದರ್ಭದಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಹೊಲಗಳನ್ನೇ ಬಾರ್ ರೆಸ್ಟೋರೆಂಟ್ ಮಾಡಿಕೊಂಡಿದ್ದಾರೆ. ಅಲ್ಲಿಯೇ ಮದ್ಯ ಪ್ಯಾಕೇಟ್ಗಳನ್ನು ಎಸೆದು, ಬಾಟಲಿಗಳನ್ನು ಒಡೆದು ಹಾಕುವ ಮೂಲಕ ರೈತರಿಗೆ ಕಿರಿಕಿರಿ ಕೊಡುತ್ತಿದ್ದಾರೆ.
ರೈತರು ಜಮೀನಿನಲ್ಲಿ ಓಡಾಡುವಾಗ ಮತ್ತು ಕಳೆ ತೆಗೆಯುವ ಸಂದರ್ಭದಲ್ಲಿ ಬಿದ್ದಿರುವ ಬಾಟಲಿಗಳ ಚೂರುಗಳು ಕಾಲಿಗೆ ಚುಚ್ಚಿಕೊಂಡು ರಕ್ತ ಬಂದಿರುವ ಉದಾಹರಣೆಗಳಿವೆ. ಇವವರಿಗೆ ಪೊಲೀಸರು ಮತ್ತು ರೈತರ ಭಯ ಇಲ್ಲದಂತಾಗಿದೆ. ಕೂಡಲೇ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪೊಲೀಸರು ಕುಡುಕರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.