ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಯಾರಿಗೂ ಖುಲ್ಲಾ ಪೆಟ್ರೋಲ್, ಡಿಸೇಲ್ ನೀಡದಂತೆ ನಗರದ ಪೆಟ್ರೋಲ್ ಬಂಕಗಳಿಗೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಯಾರ ಕೈಗೂ ಪೆಟ್ರೋಲ್, ಡಿಸೇಲ್ ಕೊಡಬೇಡಿ: ಹು-ಧಾ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ - caa news
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಹುಬಳ್ಳಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ಗಳಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
![ಯಾರ ಕೈಗೂ ಪೆಟ್ರೋಲ್, ಡಿಸೇಲ್ ಕೊಡಬೇಡಿ: ಹು-ಧಾ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ petrolbunk](https://etvbharatimages.akamaized.net/etvbharat/prod-images/768-512-5475545-thumbnail-3x2-hbly.jpg)
ಯಾರ ಕೈಗೂ ಪೆಟ್ರೋಲ್, ಡಿಸೇಲ್ ಕೊಡಬೇಡಿ
ಸಿಎಎ ವಿರುದ್ಧ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗೂ ಖುಲ್ಲಾ/ಲೂಸ್ ಡಿಸೇಲ್ ಹಾಗೂ ಪೆಟ್ರೋಲ್ ನೀಡಬಾರದು. ಒಂದು ವೇಳೆ ವಾಹನಕ್ಕೆ ಹೊರತುಪಡಿಸಿ ಬೇರೆ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ನೀಡಿದ್ದು ಕಂಡು ಬಂದ್ರೆ ಅಂತ ಪೆಟ್ರೋಲ್ ಬಂಕ್ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಹು-ಧಾ ಮಹಾನಗರದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಆಯೋಜಿಸಲಾಗಿದೆ.