ಕರ್ನಾಟಕ

karnataka

ETV Bharat / city

ಧಾರವಾಡ: ದೇಶಿ ನಾಯಿ ದತ್ತು ಪಡೆಯುವ ಶಿಬಿರ ಆಯೋಜನೆ - Domestic dog

ರಸ್ತೆಗಳಲ್ಲಿ ವಾಹನಗಳ ಅಡಿ ಸಿಲುಕಿ, ಆಹಾರವಿಲ್ಲದೇ ಹಸಿವಿನಿಂದ ನರಳಿ ಜೀವ ಕಳೆದುಕೊಳ್ಳುತ್ತಿದ್ದ ಮುಗ್ಧ ಜೀವಿಗಳಿಗೆ ನೆಲೆಯೊಂದನ್ನು ಕಲ್ಪಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಮಹಾನಗರ ಪಾಲಿಕೆ ದೇಶಿ ನಾಯಿ ದತ್ತು ಪಡೆಯುವ ಶಿಬಿರ ಆಯೋಜನೆ ಮಾಡಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.

Domestic dog adoption camp
ನಾಯಿ ದತ್ತು ಪಡೆಯುವ ಶಿಬಿರ ಆಯೋಜನೆ

By

Published : Aug 8, 2022, 9:01 AM IST

ಧಾರವಾಡ: ನಾಯಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಬೀದಿ ನಾಯಿಗಳನ್ನ ಕೀಳಾಗಿ ಕಂಡು ಕಲ್ಲಿನಲ್ಲಿ ಹೊಡೆಯುವವರೇ ಹೆಚ್ಚು. ಈ ಮಧ್ಯೆ ಧಾರವಾಡದಲ್ಲಿ ದೇಶಿ ತಳಿಯ ನಾಯಿ ದತ್ತು ಪಡೆಯುವ ಶಿಬಿರ ಆಯೋಜಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ.

ನಾಯಿ ದತ್ತು ಪಡೆಯುವ ಶಿಬಿರ ಆಯೋಜನೆ

ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಮಹಾನಗರ ಪಾಲಿಕೆ ನಾಯಿ ದತ್ತು ಪಡೆಯವ ಶಿಬಿರ ಆಯೋಜಿಸಿ 25 ಕ್ಕೂ ಹೆಚ್ಚು ದೇಸಿ ತಳಿಯ ನಾಯಿಗಳನ್ನ ದತ್ತು ನೀಡಿದೆ. ಈ ಮೊದಲೇ ದೇಶಿ ನಾಯಿಗಳ ದತ್ತು ಪಡೆಯುವ ಬಗ್ಗೆ ಆನ್​ಲೈನ್​ನಲ್ಲಿ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದು ಶಿಬಿರಕ್ಕೆ ಆಗಮಿಸಿದ ಪ್ರಾಣಿ ಪ್ರೇಮಿಗಳು ದೇಶಿ ನಾಯಿಗಳನ್ನ ದತ್ತು ಪಡೆದರು.

ನಾಯಿ ದತ್ತು ಪಡೆದವರಿಗೆ ಕೆಲ ನಿಯಮಗಳನ್ನ ವಿಧಿಸಲಾಗಿದೆ. ಶ್ವಾನ ಜೀವಂತವಾಗಿರುವವರೆಗೆ ಅದರ ಜವಾಬ್ದಾರಿ ಹೊರಬೇಕು. ಅದಕ್ಕೆ ಏನು ಆಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಪಾಲಿಕೆಯ ನಿಯಮ ಅನುಸಾರ ಸಾಕುವ ಅನುಮತಿ ಪಡೆದಿರಬೇಕು.

ಇದನ್ನೂ ಓದಿ:'ಮುದ್ದಿನ ನಾಯಿ ಹುಡುಕಿಕೊಡಿ': ರಿಯಾಲಿಟಿ ಶೋ ಸ್ಪರ್ಧಿಯ ಕಣ್ಣೀರು

ABOUT THE AUTHOR

...view details