ಕರ್ನಾಟಕ

karnataka

ETV Bharat / city

ರಕ್ತದಾನ ಮಾಡಿ ತನ್ನ ಕುಲ ಬಂಧು ಜೀವ ಉಳಿಸಿದ ನಾಯಿ... ಮನುಷ್ಯರಿಗೂ ಪಾಠ ಹೇಳುವಂತಿದೆ ಈ ಪ್ರಕರಣ - ಹುಬ್ಬಳ್ಳಿ ಧಾರವಾಡ ರೊಟ್ವೀಲರ್ ಶ್ವಾನದ ರಕ್ತದಾನ ಸುದ್ದಿ

ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ ಅಂತಾರೆ. ರಕ್ತದಾನದಿಂದ ಒಬ್ಬರ ಜೀವ ಮತ್ತೊಬ್ಬರು ಉಳಿಸಿದ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಅವಳಿ ನಗರದ ಶ್ವಾನವೊಂದು ಇನ್ನೊಂದು ಶ್ವಾನಕ್ಕೆ ರಕ್ತ ನೀಡುವ ಮೂಲಕ ಜೀವ ಉಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

dog-saved-life-by-donating-blood-to-anther-dog
ರಕ್ತದಾನ ಮಾಡಿ ಜೀವ ಉಳಿಸಿದ ಶ್ವಾನ

By

Published : Jan 16, 2020, 9:24 PM IST

Updated : Jan 16, 2020, 11:04 PM IST

ಹುಬ್ಬಳ್ಳಿ:ಮನುಷ್ಯರು ರಕ್ತ ದಾನ ಮಾಡುವುದರಲ್ಲಿ ವಿಶೇಷ ಏನೂ ಇಲ್ಲ. ಶ್ವಾನವೊಂದು ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿರುವ ಅಪರೂಪದ ಘಟನೆ ಅವಳಿ ನಗರದಲ್ಲಿ ನಡೆದಿದೆ.

ಇಲ್ಲಿನ ಸುಂದರ ನಗರದ ನಿವಾಸಿ ಮನೀಷ ಕುಲಕರ್ಣಿ ಎಂಬುವವರ ರೊಟ್ವೀಲರ್ ತಳಿಯ ರಾಣಾ ಹೆಸರಿನ ಶ್ವಾನ, ರೋಟಿ ಎನ್ನುವ ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದೆ. ಧಾರವಾಡದ ಗಣೇಶ ಅವರ ರೋಟಿ ಕಾಮಾಲೆ ( ಜಾಯಿಂಡಿಸ್ ) ರೋಗಕ್ಕೆ ತುತ್ತಾಗಿ ಕರುಳಿನ ಸಮಸ್ಯೆಯಿಂದ ಬಳಲುತ್ತಿತ್ತು, ಹೀಗಾಗಿ ರಕ್ತದ ಅವಶ್ಯಕತೆಯಿತ್ತು.

ರಕ್ತದಾನ ಮಾಡಿ ಜೀವ ಉಳಿಸಿದ ಶ್ವಾನ

ಇದನ್ನು ತಿಳಿದ ರಾಣಾ ಶ್ವಾನ ಮಾಲೀಕ ಮನೀಷ್, ರೋಟಿಗೆ ರಕ್ತದಾನ ಮಾಡಿಸಿ ಶ್ವಾನದ ಪ್ರಾಣ ಕಾಪಾಡಿ ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದ್ದಾರೆ. ಬಿ.ಇ ವಿದ್ಯಾರ್ಥಿಯಾಗಿರೋ ಮನೀಷ ಕುಲಕರ್ಣಿ ಸಹ ರಕ್ತದಾನಿಯಾಗಿರುವುದು ವಿಶೇಷ. ಸದ್ಯ ಕಳೆದ 2 ವರ್ಷದಿಂದ ಸಾಕಿರುವು ಶ್ವಾನದಿಂದ ಇದೀಗ ರೋಟಿಗೆ ರಕ್ತ ಕೊಡಿಸಿ ಶ್ವಾನದ ಜೀವ ಉಳಿಸಿದ್ದಾರೆ.

Last Updated : Jan 16, 2020, 11:04 PM IST

ABOUT THE AUTHOR

...view details