ಧಾರವಾಡ: ಒಂದು ನಾಯಿಯಿಂದ ಮತ್ತೊಂದು ನಾಯಿಗೆ ರಕ್ತದಾನ ಮಾಡಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರದ ಏಳು ತಿಂಗಳ ರಾಟ್ ವಿಲ್ಲರ್ ತಳಿಯ ನಾಯಿಯೊಂದರ ಹೊಟ್ಟೆಯಲ್ಲಿ ಸಮಸ್ಯೆಯಿತ್ತು. ಈ ಹಿನ್ನೆಲೆ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಆ ನಾಯಿ ಹೊಟ್ಟೆಯಲ್ಲಿ ರಕ್ತ ಸ್ರಾವವಾಗಿತ್ತು. ನಾಯಿ ಬದುಕುವ ಸಾಧ್ಯತೆ ಕ್ಷೀಣಿಸಿತ್ತು.
ರಾಟ್ ವಿಲ್ಲರ್ ಮಾಲೀಕ ಧಾರವಾಡ ಕೃಷಿ ವಿವಿಯಲ್ಲಿರುವ ಪಶು ಆಸ್ಪತ್ರೆಗೆ ಚಿಕಿತ್ಸೆಗಾಗಿ ಶ್ವಾನವನ್ನು ಕರೆ ತಂದಿದ್ದರು. ಕೃಷಿ ವಿವಿಯ ಪಶು ಆಸ್ಪತ್ರೆ ವೈದ್ಯ ಅನಿಲ ಪಾಟೀಲ್ ರಾಟ್ ವಿಲ್ಲರ್ಗೆ ಒಂದು ಯುನಿಟ್ ರಕ್ತ ಹಾಕಿದರೆ ಉಳಿಯುತ್ತದೆ ಎಂದಿದ್ದಕ್ಕೆ ಧಾರವಾಡದ ಪ್ರಾಣಿಪ್ರಿಯ ಸೋಮಶೇಖರ ಚೆನ್ನಶೆಟ್ಟಿ ಜರ್ಮನ್ ಶೆಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದಾರೆ.
ಇದನ್ನೂ ಓದಿ:ಗೋಮಾಳ ಭೂಮಿ ರಕ್ಷಣೆಗಾಗಿ ಪೇಶಾವರ ಶ್ರೀಗಳ ಪಣ
ಈ ಎರಡು ನಾಯಿಗಳ ರಕ್ತದ ಮಾದರಿ ಒಂದೇ ಇದ್ದ ಕಾರಣ ರಕ್ತ ದಾನ ಮಾಡಿಸಿದರು. ಸದ್ಯ ಒಂದು ನಾಯಿಗೆ ಮತ್ತೊಂದು ನಾಯಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದೆ.